Thursday, June 18, 2026
spot_imgspot_img
spot_imgspot_img

ತಂಗಿಯ ಮೇಲಿನ ಸೇಡಿಗೆ ತಂಗಿ ಮಗುವನ್ನು ಕೊಲೆ ಮಾಡಿದ ಅಕ್ಕ

- Advertisement -
- Advertisement -

ತಂಗಿಯ ಮೇಲಿನ ಸೇಡಿಗೆ ಆಕೆ ಮಗುವನ್ನು ಅಕ್ಕನೇ ಕೊಲೈಗದ ಘಟನೆ ಚಿಕ್ಕಬಳ್ಳಾಪುರ ಪೇರೇಸಂದ್ರ ಬಳಿಯ ಮುತ್ತಕದ ಹಳ್ಳಿಯಲ್ಲಿ ನಡೆದಿದೆ.

ಕೊಲೆ ಮಾಡಿದ ಆರೋಪಿ ಅಂಬಿಕಾ ಎಂದು ಗುರುತಿಸಲಾಗಿದೆ. ಅಂಬಿಕಾ ತನ್ನ ತಂಗಿ ಅನಿತಾಳ ಮಗ ಮಧು(೬) ಹಾಗೂ ಮಗಳನ್ನು ಗುರುವಾರ ಬೆಳಗ್ಗೆ ಮನೆಯಿಂದ ಕರೆದುಕೊಂಡು ಹೋಗಿದ್ದಳು. ಬಳಿಕ ಮಧುವನ್ನು ಗುಡಿಬಂಡೆ ಮಾರ್ಗದಲ್ಲಿರುವ ಮಾವಿನ ತೋಟಕ್ಕೆ ಕರದುಕೊಂಡು ಹೋಗಿ ಗುದ್ದಲಿಯಿಂದ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿ ಮಣ್ಣಲ್ಲಿ ಹೂತು ಹಾಕಿದ್ದಾಳೆ.
ಇನ್ನು ಹೆಣ್ಣು ಮಗುವನ್ನು ಕರೆದುಕೊಂಡು ಯಲಹಂಕಗೆ ತೆರಳಿ ಅಕೆಯನ್ನು ಮಾರಾಟ ಮಾಡಲು ಮುಂದಾಗಿದ್ದಳು ಎನ್ನಲಾಗಿದೆ.

ಇನ್ನು ಅಂಬಿಕಾಳ ನಡವಳಿಕೆಯಿಂದ ಆಟೋ ಚಾಲಕನೊಬ್ಬ ಅನುಮಾನಗೊಂಡು ಆಕೆಯನ್ನು ಹಾಗೂ ಹೆಣ್ಣು ಮಗುವನ್ನು ಕಬ್ಬನ್ ಪಾರ್ಕ್‌ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾನೆ.
ಈ ವೇಳೆ ಪೊಲೀಸರು ಬಾಲಕಿಯ ತಾಯಿ ಹಾಗೂ ಪೇರೇಸಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಮೃತದೇಹವನ್ನು ಮಣ್ಣಿನಿಂದ ಪೊಲೀಸರು ಹೊರತೆಗೆದಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

ಅಂಬಿಕಾ ಹಾಗೂ ಅನಿತಾ ಅಕ್ಕ ತಂಗಿಯರು. ಅನಿತಾ ಹಲವು ವರ್ಷಗಳ ಹಿಂದೆ ಗಂಡ ಮದ್ಯವ್ಯಸನಿ ಎಂದು ಗಂಡನನ್ನು ತೊರೆದು ಬಂದು ತವರು ಮನೆಯಲ್ಲಿ ವಾಸವಾಗಿದ್ದಳು.ಅಂಬಿಕಾ ಕೂಡ ಒಂದು ವಾರದ ಹಿಂದೆ ಪತಿಯನ್ನು ತೊರೆದು ತವರು ಸೇರಿದ್ದಳು. ಅಕ್ರಮ ಸಂಬಂಧದ ಶಂಕೆ ಮೂಡಿದ್ದು, ಅಂಬಿಕಾಳಿಗೆ ಅನಿತಾ ಬೈದಿದ್ದಳು. ಇದೇ ಕಾರಣಕ್ಕೆ ಮಗುವನ್ನು ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.

- Advertisement -

Related news

error: Content is protected !!