Tuesday, July 21, 2026
spot_imgspot_img
spot_imgspot_img

ಆನೇಕಲ್: ಪೆಟ್ರೋಲ್ ಸುರಿದು ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

- Advertisement -
- Advertisement -

ಆನೇಕಲ್: ಪತ್ನಿ- ಮಕ್ಕಳನ್ನು ತನ್ನೊಂದಿಗೆ ಕಳುಹಿಸಿಕೊಡಿ ಎಂದ ಅಳಿಯನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಘಟನೆ ನಡೆದಿದೆ.

ಸುಟ್ಟ ಗಾಯಗಳೊಂದಿಗೆ ತಮಿಳುನಾಡಿನ ಕೃಷ್ಣಗಿರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ನವೀನ್(25) ಮೇ.2ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಸಾಯುವ ಮುನ್ನ ಕೃಷ್ಣಗಿರಿಯ ಮಾಜಿಸ್ಟ್ರೇಟ್ ಮುಂದೆ ಡೆತ್ ಡಿಕ್ಲರೇಷನ್ ಹೇಳಿಕೆ ನೀಡಿದ್ದ ನವೀನ್ ತನ್ನ ಮೇಲೆ ಪೆಟ್ರೋಲ್ ಸುರಿದು ಹಲ್ಲೆ ಮಾಡಿ ಬೆಂಕಿ ಹಚ್ಚಿದ ಮಾವ ಸಂಪಂಗಿ, ಬಾಮೈದ ಮುನೇಶ್, ಅತ್ತೆ ಪಚ್ಚಮ್ಮ ಹಾಗೂ ಹೆಂಡತಿ ಸುಚಿತ್ರಾ ಮೇಲೆ ಹೇಳಿಕೆ ದಾಖಲಿಸಿ ಅಸುನೀಗಿದ್ದಾರೆ. ಅದರಂತೆ ಈ ಮೊದಲೇ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದ ಆನೇಕಲ್ ಪೊಲೀಸರು ಕೃಷ್ಣಗಿರಿ ನ್ಯಾಯಾಲಯದಿಂದ ಬಂದ ಡೆತ್ ಡಿಕ್ಲರೇಷನ್ ನೋಟ್ ಆಧರಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಕೊಲೆ ಪ್ರಕರಣ ದಾಖಲಿಸಿರುವ ಆನೇಕಲ್ ಪೊಲೀಸರು ಮಾವ ಸಂಪಂಗಿ ಬಾಮೈದ ಮುನೀಶನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!