- Advertisement -
- Advertisement -



ಬೆಳ್ತಂಗಡಿ : ಕೊಕ್ಕಡ ಗ್ರಾಮದ ಸೌತಡ್ಕ ಗುಂಡಿ ಎಂಬಲ್ಲಿ ಕಾಡಾನೆಗಳು ತಿರುಗಾಡುತ್ತಿದ್ದು ಅದನ್ನು ಕಾಡಿಗೆ ಓಡಿಸುವ ಸಂದರ್ಭದಲ್ಲಿ, ಸೌತಡ್ಕ ನಿವಾಸಿ ಬಾಲಕೃಷ್ಣ ಶೆಟ್ಟಿ(60) ಎಂಬವರು ಆನೆ ದಾಳಿಗೆ ಜುಲೈ 17 ರಂದು ಬಲಿಯಾಗಿದ್ದರು.
ಈ ಬಗ್ಗೆ ಜುಲೈ17 ರಂದು ಸಂಜೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ರಕ್ಷಿತ್ ಶಿವರಾಮ್ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ “ಆನೆ-ಮಾನವ ಸಂಘರ್ಷದಿಂದ, ತಾಲೂಕಿನಲ್ಲಿ ಹೆಚ್ಚಿನ ನಷ್ಟ ಹಾಗೂ ಸಾವು ಸಂಭವಿಬಲಿಯಾಗಿದ್ದರು ನಿಯಂತ್ರಣಕ್ಕೆ ಸರ್ಕಾರ ಸಕಲ ರೀತಿಯ, ಪ್ರಯತ್ನ ಮಾಡುವಂತೆ, ಹಾಗೂ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ಗರಿಷ್ಠ ಪ್ರಮಾಣದ ಪರಿಹಾರವನ್ನು ನೀಡಬೇಕೆಂದು ಮನವಿಯನ್ನು ಸಲ್ಲಿಸಿದರು ಮನವಿಗೆ ಸಚಿವರ ಪೂರಕವಾಗಿ ಸ್ಪಂದಿಸುವ ಭರವಸೆ ನೀಡಿದರು.
- Advertisement -








