Saturday, May 11, 2024
spot_imgspot_img
spot_imgspot_img

ಕೆಟ್ಟು ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಡಿಕ್ಕಿ; ಚಾಲಕನಿಗೆ ಗಾಯ..!

- Advertisement -G L Acharya panikkar
- Advertisement -

ರಸ್ತೆ ಪಕ್ಕದಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಡಿಕ್ಕಿ ಹೊಡೆದ ಘಟನೆ ಚಾಮರಾಜನಗರ ಹನೂರು ತಾಲೂಕಿನ ಗಡಿ ಭಾಗವಾದ ಗರಿಕೆಕಿಂಡಿ ಸಮೀಪ ನಡೆದಿದೆ.

ಚಾಮರಾಜನಗರದಿಂದ ತಮಿಳುನಾಡಿಗೆ ತೆರುಳುತ್ತಿದ್ದ ಲಾರಿಯೊಂದು ಕೆಟ್ಟು ರಸ್ತೆಯ ಪಕ್ಕದಲ್ಲಿ ನಿಂತಿತ್ತು. ಈ ವೇಳೆ ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುತ್ತಿದ್ದಂತಹ ಲಾರಿಯೊಂದು ಡಿಕ್ಕಿ ಹೊಡೆದು ರಸ್ತೆಯ ಪಕ್ಕದ ಗೋಡೆಗೂ ಸಹ ಗುದ್ದಿದೆ. ಇದರ ಪರಿಣಾಮ ಲಾರಿಗಳೆರಡು ಜಖಂಗೊಂಡು ಚಾಲಕನಿಗೆ ಗಾಯಗಳಾಗಿವೆ.

ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಅವಘಡ ಶನಿವಾರ ಮುಂಜಾನೆ 5 ಗಂಟೆಯಲ್ಲಿ ಸಂಭವಿಸಿದೆ ಹಾಗೂ ಕೆಲ ಕಾಲ ರಸ್ತೆ ಅಡಚಣೆ ಉಂಟಾಗಿತ್ತು ಎಂದು ತಿಳಿದುಬಂದಿದೆ.

- Advertisement -

Related news

error: Content is protected !!