ಶಿವಮೊಗ್ಗ:-ನಾಳೆಯಿಂದ ಬೀದರ್, ರಾಯಚೂರು ಗುಲ್ಬರ್ಗ ಸೇರಿದಂತೆ ಐದು ಜಿಲ್ಲೆಯ ಎಪಿಎಂಸಿ ಮಾರುಕಟ್ಟೆ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಅದರಂತೆ ಶಿವಮೊಗ್ಗ ಜಿಲ್ಲೆಯ ಎಪಿಎಂಸಿಯೂ ಸಹ ಇಂದಿನಿಂದ ಬಂದ್ ಆಗಲಿದೆ.ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಡಿಎಂ ಶಂಕರಪ್ಪ ಎಪಿಎಂಸಿಯ ಎಲ್ಲಾ ವ್ಯವಹಾರಗಳು ಇಂದಿನಿಂದ ಬಂದ್ ಮಾಡಲಾಗುತ್ತಿದೆ. ಈ ನಿರ್ಧಾರ ಕೇಂದ್ರ ಸರ್ಕಾರದ ಕೃಷಿ ಉತ್ಪನ್ನಗಳ ಮಾರಾಟದ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿದ್ದು ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ನಡೆಸುವ ವ್ಯವಹಾರಕ್ಕೆ ಸೆಸ್ ಕಟ್ಟಬೇಕಿದ್ದು ಈ ಸೆಸ್ ನ್ನ ತೆಗೆಯಲು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡರು ಸಹ ಸರ್ಕಾರ ಮಾತುಕತೆಗೆ ಸಿದ್ದವಿಲ್ಲ.
ಈ ಹಿನ್ನಲೆಯಲ್ಲಿ ಶಿವಮೊಗ್ಗ ಎಪಿಎಂಸಿಯಲ್ಲಿ ವ್ಯವಹಾರ ನಡೆಯದಂತೆ ಆಗ್ರಹಿಸಿ ಇಂದಿನಿಂದ ಅನಿರ್ದಿಷ್ಠಾವಧಿ ಕಾಲ ಪ್ರತಿಭಟನೆಗೆ ಶಿವಮೊಗ್ಗ ಅಡಿಕೆ ವರ್ತಕರ ಸಂಘ ಮುಂದಾಗಿದೆ.ಸಾಗರ, ಶಿಕಾರಪುರ ಸೊರಬ, ತೀರ್ಥಹಳ್ಳಿ ಸೇರಿದಂತೆ ಎಲ್ಲಾ ತಾಲೂಕಿನ ಎಪಿಎಂಸಿ ಬಂದ್ ಆಗಲಿದೆ ಎಂದು ಶಂಕರಪ್ಪ ತಿಳಿಸಿದರು. ಶಿವಮೊಗ್ಗದಲ್ಲಿ ಒಂದು ಲಾರಿ ಲೋಡ್ ಗೆ ಒಂದು ಲಕ್ಷ ರೂ ಸೆಸ್ ಕಟ್ಟಲಾಗುತ್ತಿದೆ. ಶಿವಮೊಗ್ಗದಲ್ಲಿನ ಅಡಿಕೆ ವಿವಿಧ ಭಾಗಗಳಲ್ಲಿ 10 ರಿಂದ 15 ಲೋಡು ಅಡಿಕೆ ಸಾಗಾಟವಾಗಲಿದೆ. ಅಂದರೆ ಪ್ರತಿ ದಿನ 15 ಲಕ್ಷ ರೂ. ಸೆಸೆ ಕಟ್ಟಲಾಗುತ್ತಿದೆ. ಎಪಿಎಂಸಿಯ ಹೊಸ ಕಾಯ್ದೆ ಪ್ರಕಾರ ರೈತರು ಎಲ್ಲಿಬೇಕಾದರೂ ವಹಿವಾಟು ನಡೆಸಬಹುದು ಎಂದು ತಿಳಿಸುತ್ತದೆ.
ಆದರೆ ಈ ಕಾಯ್ದೆಯ ಪ್ರಕಾರ ಎಪಿಎಂಸಿಯಲ್ಲಿ ವ್ಯಾಪಾರ ನಡೆಸಿದರೆ ವ್ಯಾಪಾರಸ್ಥರು ಸೆಸ್ ಕಟ್ಟಬೇಕು. ಆದರೆ ಹೊರಗಡೆ ವ್ಯಾಪಾರ ನಡೆಸಿದರೆ ಸೆಸ್ ಇಲ್ಲವೆಂದು ಹೊಸ ಕಾಯ್ದೆ ತಿಳಿಸುತ್ತದೆ ಇದನ್ನ ತಿದ್ದುಪಡಿ ಮಾಡಿ ಎಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಯ ಎಪಿಎಂಸಿ ಮನವಿ ಮಾಡಿಕೊಂಡಿತ್ತು. ಈ ಮನವಿಗೆ ಯಾವುದೇ ಮನ್ನಣೆ ಇಲ್ಲದ ಕಾರಣ ಇಂದಿನಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.