Monday, June 8, 2026
spot_imgspot_img
spot_imgspot_img

ಅರಂತೋಡು: ರಬ್ಬರ್ ಸ್ಮೋಕ್ ಹೌಸ್‌ಗೆ ಆಕಸ್ಮಿಕ ಬೆಂಕಿ

- Advertisement -
- Advertisement -

ಅರಂತೋಡು: ರಬ್ಬರ್ ಸ್ಮೋಕ್ ಹೌಸ್‌ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ರಬ್ಬರ್ ಸುಟ್ಟು ಹೋದ ಘಟನೆ ಅರಂತೋಡು ಗ್ರಾಮದ ಪಿಂಡಿಮನೆ ಎಂಬಲ್ಲಿ ನಡೆದಿದೆ.

ಅರಂತೋಡು ಗ್ರಾಮದ ಪಿಂಡಿಮನೆ ಎಂಬಲ್ಲಿನ ರಾಧಾಕೃಷ್ಣ ಎಂಬವರಿಗೆ ಸೇರಿದ ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ ತಗುಲಿ ರಬ್ಬರ್ ಸುಟ್ಟು ಹೋಗಿದೆ ಎನ್ನಲಾಗಿದೆ. ಘಟನೆಯಲ್ಲಿ ಸುಮಾರು 1,00,000/- ರೂ. ಮೌಲ್ಯದ ಅಡಿಕೆ ಹಾಗೂ ರಬ್ಬರ್ ಶೀಟುಗಳು ಸುಟ್ಟು ಹೋಗಿದೆ ಎಂದು ಅಂದಾಜಿಸಲಾಗಿದೆ.

ಬೆಂಕಿಯನ್ನು ಸುಳ್ಯ ಅಗ್ನಿ ಶಾಮಕ ಸಹಾಯಕ ಠಾಣಾಧಿಕಾರಿ ಕಿರಣ್ ಕುಮಾರ್ ಹಾಗೂ ಸಿಬ್ಬಂದಿಗಳು ನಂದಿಸಿದರು.

- Advertisement -

Related news

error: Content is protected !!