Sunday, May 5, 2024
spot_imgspot_img
spot_imgspot_img

ವೇಷ ಹಾಕಿ ಸಂಗ್ರಹಿಸಿದ 8 ಲಕ್ಷ ರೂ.ವನ್ನು ಬಡ ಮಕ್ಕಳ ಚಿಕಿತ್ಸೆಗೆ ನೀಡಿದ -ಬಡವರ ಪಾಲಿನ ಆಪತ್ಬಾಂಧವ

- Advertisement -G L Acharya panikkar
- Advertisement -

ಅನಾರೋಗ್ಯದಿಂದ ಇರುವ ಬಡ ಅಶಕ್ತ ಮಕ್ಕಳ ವೈದ್ಯಕೀಯ ವೆಚ್ಚ ಭರಿಸಲು ಈ ಬಾರಿ ರವಿ ಕಟಪಾಡಿ ಸೀ ಫೋಕ್ ಎಂಬ ಆಂಗ್ಲ ಚಲನಚಿತ್ರದ ವೇಷವನ್ನು ಧರಿಸಿ ಹಣ ಸಂಗ್ರಹಿಸಿದ್ದಾರೆ. ಸಮಾಜ ಸೇವಕ ರವಿ ಕಟಪಾಡಿ ತಂಡವು ಕಟಪಾಡಿಯ ಶ್ರೀ ಕ್ಷೇತ್ರ ಪೇಟೆಬೆಟ್ಟು ಭಗವಾನ್ ಶ್ರೀ ಬಬ್ಬುಸ್ವಾಮಿ, ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ 5 ಬಡ ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಈ ಬಾರಿ ಸಂಗ್ರಹಿಸಿದ 8,22,212 ರೂಪಾಯಿಯನ್ನು ವಿತರಣೆ ಮಾಡಿದರು.

ರವಿ ಕಟಪಾಡಿ ಈ ಸಂದರ್ಭ ಮಾತನಾಡಿ, ತಂಡವು ಡಬ್ಬಿಯನ್ನು ಹಿಡಿಯದೆ ಜನರ ಪ್ರೀತಿ, ವಿಶ್ವಾಸ, ನಂಬಿಕೆಯ ಮೇಲೆಗೆ ಸಂಗ್ರಹವಾಗಿರುವ ಹಣವನ್ನು ಈ ಬಾರಿ ಅನಾರೋಗ್ಯದಿಂದಿರುವ ಕಾರ್ಕಳ ಕಣಜಾರು ನಿಶ್ಮಿತಾ ಕೆ. ಅವರಿಗೆ 3 ಲಕ್ಷ ರೂ., ಕುಂದಾಪುರ ಕಟ್ ಬೇಲ್ಲೂರು ನಾಗೇಂದ್ರಗೆ 2 ಲಕ್ಷ 50 ಸಾವಿರ ರೂಪಾಯಿ, ಮಾರಣಕಟ್ಟೆ ಇಡೂರು ಸುಶಾಂತ್ ಶೆಟ್ಟಿಗೆ ಮತ್ತು ಋತಿಕ್ ಮೂಡಬಿದ್ರಿಗೆ ತಲಾ 1 ಲಕ್ಷ ರೂಪಾಯಿ, ಸಸಿಹಿತ್ತುವಿನ ಪೂರ್ವಿಗೆ 50 ಸಾವಿರ ರೂಪಾಯಿ ನೀಡಲಾಗಿದೆ. ಈ ಮೂಲಕ 9 ವರ್ಷಗಳಿಂದ ಅಷ್ಟಮಿಯಂದು ವೇಷ ಧರಿಸಿ ಸಂಗ್ರಹಿಸಲಾದ ಒಟ್ಟು 1 ಕೋಟಿ 22ಲಕ್ಷ ರೂಪಾಯಿಯನ್ನು 118 ಬಡ ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೀಡಿದಂತಾಗಿದೆ ಎಂದರು.

ಶ್ರೀ ಕ್ಷೇತ್ರ ಪೇಟೆಬೆಟ್ಟು ಗುರಿಕಾರರಾದ ಹರಿಶ್ಚಂದ್ರ ಪಿಲಾರು ಮತ್ತು ತುಕಾರಾಮ್ ಎಸ್. ಉರ್ವ ಶುಭವನ್ನು ಹಾರೈಸಿದರು. ಈ ಸಂದರ್ಭದಲ್ಲಿ ಮಹೇಶ್ ಶೆಣೈ, ಅರ್ಚಕರಾದ ಜಯಕರ ವಿ., ಪ್ರಮುಖರಾದ ಯಶವಂತ್, ಶಂಕರ್ ಕಟಪಾಡಿ, ರಾಜ್‌ಗೋಪಾಲ್, ಲಕ್ಷ್ಮಣ್, ಉಮೇಶ್ ಹಾಗೂ ರವಿ ಫ್ರೆಂಡ್ಸ್ ಕಟಪಾಡಿ ತಂದ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!