- Advertisement -
- Advertisement -
ವಿಟ್ಲ: ವಿಟ್ಲ ಅರಮನೆಯ ಅರಸರು, ವಿಟ್ಲದ ರಾಜಮನೆತನದ ಹಿರಿಯರು ಆದ ವಿ ಜನಾರ್ದನ ವರ್ಮ ಅರಸರು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಅಪಾರ ಬಂಧು ಬಳಗವನ್ನು ಹೊಂದಿದ್ದರು. ವಿಟ್ಲ ರಾಜಮನೆತನದ ಹಿರಿಯರಾಗಿದ್ದರು. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಹಿಂದಿನ ಕಾಲದಿಂದಲೂ ಇದೇ ಅರಸು ಮನೆತನದ ಆಡಳಿತಗೊಳಪಟ್ಟಿದೆ. ಇಂದು ಮಧ್ಯಾಹ್ನ ೧೨ ಗಂಟೆಗೆ ಅರಸು ಮನೆತನಕ್ಕೆ ಸಂಬಂಧಪಟ್ಟ ಬಾಕಿಮಾರ್ ಜಾಗದಲ್ಲಿ ಅರಸು ಮನೆತನದವರ ಸಮ್ಮುಖದಲ್ಲಿ ಸಕಲ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ. ಇವರ ನಿಧನ ಸುದ್ದಿ ಇಡೀ ವಿಟ್ಲದ ಜನತೆಗೆ ನೋವುಂಟು ಮಾಡಿದೆ.
- Advertisement -