Wednesday, May 1, 2024
spot_imgspot_img
spot_imgspot_img

ದುಬೈನಲ್ಲಿ ವರುಣನ ಅರ್ಭಟ: ಇಡೀ ವರ್ಷದ ಮಳೆ ಕೇವಲ 12 ಗಂಟೆಯಲ್ಲಿ, ಜನಜೀವನ ಅಸ್ತವ್ಯಸ್ಥ

- Advertisement -G L Acharya panikkar
- Advertisement -

ದುಬೈನಲ್ಲಿ ಕಳೆದ 24 ಗಂಟೆಗಳಿಂದ ಭಾರಿ ಮಳೆ ಯಾಗುತ್ತಿದ್ದು ವಿಮಾನ ನಿಲ್ದಾಣ ಜಲಾವೃತಗೊಂಡಿದೆ. ಕೆಲವು ವಿಮಾನ ಗಳ ಹಾರಾಟ ಸ್ಥಗಿತಗೊಂಡಿದೆ. ಮಳೆಯಿಂದಾಗಿ ಯುಎಇಯ ಪ್ರಮುಖ ಹೆದ್ದಾರಿಗಳ ಭಾಗಗಳು ಜಲಾವೃತಗೊಂಡಿದ್ದು ರಸ್ತೆಗಳಲ್ಲಿ ವಾಹನಗಳು ಸಿಲುಕಿಕೊಂಡಿವೆ.ದುಬೈ ನಗರದಲ್ಲಿ ಇಡೀ ವರ್ಷ ಬೀಳುವ ಸರಾಸರಿ ಮಳೆಗಿಂತಲೂ ಹೆಚ್ಚು ಪ್ರಮಾಣದ ಮಳೆ ಕೇವಲ 12 ಗಂಟೆಯಲ್ಲಿ ಸುರಿದಿದೆ.

ದುಬೈನಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಬಿರುಗಾಳಿ ಮಳೆ ಆರ್ಭಟಿಸುತ್ತಿದೆ. ಎಲ್ಲಿ ನೋಡಿದರೂ ನೀರು ತುಂಬಿಕೊಂಡಿದೆ. ಮಳೆ ಕಾರಣದಿಂದ ಯುಎಇ ಮತ್ತು ಬಹರೇನ್ ದೇಶಗಳ ಜನಜೀವನ ಅಸ್ತವ್ಯಸ್ತಗೊಂಡಿದೆ.

ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಹಲವು ವಿಮಾನಗಳು ರದ್ದಾಗಿದ್ದು, ಹಲವು ವಿಮಾನಗಳು ವಿಳಂಬಗೊಂಡಿದ್ದವು.

ಭಾರೀ ಮಳೆಯಿಂದಾಗಿ, ಯುಎಇ ಆಡಳಿತವು ಮಂಗಳವಾರ ಜನರನ್ನು ತಮ್ಮ ಮನೆಗಳಲ್ಲಿ ಇರುವಂತೆ ವಿನಂತಿಸಿದೆ. ಶಾಲೆಗಳು ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸುತ್ತಿದ್ದವು. ಸರ್ಕಾರಿ ನೌಕರರಿಗೂ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಹೆದ್ದಾರಿಗಳು ಮತ್ತು ರಸ್ತೆಗಳಿಂದ ನೀರನ್ನು ತೆಗೆದುಹಾಕಲು ಆಡಳಿತವು ಬೃಹತ್ ಪಂಪ್‌ಗಳನ್ನು ಅಳವಡಿಸಬೇಕಾಗಿತ್ತು.

ರಾಷ್ಟ್ರೀಯ ಹವಾಮಾನ ಕೇಂದ್ರವು ದುಬೈ, ಅಬುಧಾಬಿ, ಶಾರ್ಜಾ ಮತ್ತು ಇತರ ಕೆಲವು ಎಮಿರೇಟ್‌ಗಳ ನಿವಾಸಿಗಳಿಗೆ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಮತ್ತು ಆಲಿಕಲ್ಲು ಮಳೆ ಸುರಿಯಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಯುಎಇಯ ನೆರೆಯ ದೇಶಗಳಾದ ಬಹ್ರೇನ್, ಕತಾರ್ ಮತ್ತು ಸೌದಿ ಅರೇಬಿಯಾದಲ್ಲೂ ಭಾರೀ ಮಳೆಯಾಗಿದೆ.

- Advertisement -

Related news

error: Content is protected !!