- Advertisement -
- Advertisement -




ಶಿವಮೊಗ್ಗ : ನ್ಯಾಯಾಲಯ ಗಾಂಜಾ ಮಾರಾಟಗಾರರಿಬ್ಬರಿಗೆ 3 ವರ್ಷ ಜೈಲು ಮತ್ತು ₹25,000 ದಂಡ ವಿಧಿಸಿದೆ.ಶಿವಮೊಗ್ಗ ಸಾಗರ ಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 04-08-2021 ರಂದು ನಡೆದ ಪ್ರಕರಣ ಇದಾಗಿದೆ. ಸಾಗರದ ಬಿಹೆಚ್ ರಸ್ತೆಯ ಸದ್ಗುರು ಲೇ ಔಟ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಅಂದಿನ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿತ್ತು.
ಈ ವೇಳೆ ಒಟ್ಟು 1 ಕೆ.ಜಿ 60 ಗ್ರಾಂ ಒಣ ಗಾಂಜಾ, ₹800 ರೂಪಾಯಿ ಕ್ಯಾಶ್ ಹಾಗೂ ಮಾರುತಿ ಓಮಿನಿ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಆರೋಪಿಗಳ ವಿರುದ್ಧ ಎನ್.ಡಿ.ಪಿ.ಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿ ಪಿಎಸ್ಐ ಸಾಗರ್ ಕರ್ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಸಂಬಂಧ ಪ್ರಧಾನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಶಿವಮೊಗ್ಗ ದಲ್ಲಿ ವಿಚಾರಣೆ ನಡೆದಿತ್ತು.
- Advertisement -








