Saturday, September 5, 2026
spot_imgspot_img
spot_imgspot_img

ಬಾಲಕನಿಗೆ ಲೈಂಗಿಕ ಕಿರುಕುಳ: ಆರೋಪಿ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಉಡುಪಿ: ಕಾಪು ಬೀಚ್‌ನಲ್ಲಿ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ವಿರುದ್ಧ ಪೋಕೋ ಕೇಸ್ ದಾಖಲಾಗಿದೆ. ಮೈಸೂರಿನಿಂದ ಮಗನ ಜೊತೆ ಪ್ರವಾಸ ಬಂದಿದ್ದ ದಂಪತಿ ಕಾಪು ಬೀಚ್‌ನಲ್ಲಿ ತಿರುಗಾಡುತ್ತಿದ್ದಾಗ ಶೌಕತ್ ಅಲಿ (47) ಎಂಬಾತ ಶೌಚಾಲಯದ ಬಳಿ ಬಾಲಕನನ್ನು ಹಿಡಿದು ಚುಂಬಿಸಿ ಕಿರುಕುಳ ನೀಡಿದ್ದ. ಇದನ್ನು ನೋಡಿ ಬಾಲಕನ ತಂದೆ ಬೊಬ್ಬೆ ಹಾಕಿದ್ದು, ಆಗ ಆರೋಪಿ ಸ್ಥಳದಿಂದ ಪಲಾಯನ ಮಾಡಲು ಯತ್ನಿಸಿದ್ದ.ಆದರೆ ಬೀಚ್‌ನಲ್ಲಿ ಗಸ್ತು ನಿರತ ಪೊಲೀಸರು ಮತ್ತು ಸಾರ್ವಜನಿಕರು ಅವನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು.

ಕಾಪು ಪೊಲೀಸರು ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸ್‌ ಕೇಸ್‌ ದಾಖಲಿಸಿಕೊಂಡಿದ್ದು, ನ್ಯಾಯಾಲಯ ಅವನನ್ನು 15 ದಿನಗಳ ಅವಧಿಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.

- Advertisement -

Related news

error: Content is protected !!