Sunday, July 26, 2026
spot_imgspot_img
spot_imgspot_img

ಪುತ್ತೂರು: ನಗರ ಪೊಲೀಸರಿಂದ ಹಗಲು ಮನೆ ಕಳ್ಳತನದ ಆರೋಪಿಯ ಬಂಧನ; 18 ಗ್ರಾಂ ಚಿನ್ನ ಹಾಗೂ ನಗದು ವಶಕ್ಕೆ

- Advertisement -
- Advertisement -

ಪುತ್ತೂರು: ಮನೆಗಳ್ಳತನ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅ.12ರಂದು ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 5-00 ಗಂಟೆಯ ಮಧ್ಯೆ ತನ್ನ ವಾಸದ ಮನೆಯಿಂದ ಯಾರೋ ಕಳ್ಳರು 1 ಚಿನ್ನದ ಬಳೆ, 1 ಜೊತೆ ಕಿವಿಯೋಲೆ, 1 ಚಿನ್ನದ ಸರ ಹಾಗೂ ನಗದು ಹಣ ಕಳವಾದ ಬಗ್ಗೆ ಸಿಟಿಗುಡ್ಡೆ ರೇವತಿ ಎಂಬವರ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ 89/2025 ಕಲಂ:331 (3), 305 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಆರೋಪಿ ಪ್ರವೀಣ್ (27) ಸಿಟಿಗುಡ್ಡೆ ಮನೆ, (ಕಬಕ ಗ್ರಾಮ) ಎಂಬಾತನನ್ನು ಪತ್ತೆ ಮಾಡಿ ವಶಕ್ಕೆ ಪಡೆದು ಕಳವು ಮಾಡಿದ ಚಿನ್ನಾಭರಣ ಹಾಗೂ ನಗದು ಹಣವನ್ನು ವಶಕ್ಕೆ ಪಡೆಯಾಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ

- Advertisement -

Related news

error: Content is protected !!