Friday, September 4, 2026
spot_imgspot_img
spot_imgspot_img

*ಮಂಗಳೂರು:’ಸೈಬರ್ ವಂಚನೆ ಪ್ರಕರಣ:* *24 ಲಕ್ಷಕ್ಕೂ ಅಧಿಕ ರೂ. ಸುಲಿಗೆ -ಆರೋಪಿ ಬಂಧನ*

- Advertisement -
- Advertisement -

ಮಂಗಳೂರು: ಇನ್ಸಾಗ್ರಾಂ ಖಾತೆಯ ಮೂಲಕ ಸಾರ್ವಜನಿಕರಿಗೆ ‘ವೈಯಕ್ತಿಕ ಸಮಸ್ಯೆಗಳಿಗೆ ಪೂಜೆ ಮಾಡಿ ತತ್‌ಕ್ಷಣ ಪರಿಹಾರ’ ನೀಡುವುದಾಗಿ ನಂಬಿಸಿ ಒಬ್ಬ ವ್ಯಕ್ತಿಯಿಂದ ರೂ. 24,78,274 ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಸೈಬ‌ರ್ ಅಪರಾಧ ಪೊಲೀಸ್‌ ಠಾಣೆಯಲ್ಲಿ ಅ.ಕ್ರ. 87/2025, 3. 66(D) IT Act : 318(4) BNS ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ತನಿಖೆಯ ವೇಳೆ ದಿನಾಂಕ: 04-11-2025 ರಂದು ವಾಸುದೇವ ಆರ್ (32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮೂಲತಃ ಗೋಕುಲ 1st ಹಂತ, ಯಶವಂತಪುರ, ಬೆಂಗಳೂರು ನಿವಾಸಿಯಾಗಿದ್ದು, ಪ್ರಸ್ತುತ ಶ್ರೀನಿವಾಸನಗರ, ಸುಂಕದಕಟ್ಟೆ, ಬೆಂಗಳೂರುಯಲ್ಲಿ ವಾಸಿಸುತ್ತಿದ್ದನು.ಪೊಲೀಸರು ಆರೋಪಿಯಿಂದ ಕೃತ್ಯಕ್ಕೆ ಬಳಸಿದ 4 ಮೊಬೈಲ್ ಫೋನ್‌ಗಳು, ಹಾಗೂ ರೂ. 20,300 ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಸ್ವಾಧೀನಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ರೂ1,60,300 ಆಗಿದೆ.ಆರೋಪಿಯನ್ನು 05-11-2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್‌ ಠಾಣೆ ತನಿಖೆ ಮುಂದುವರಿಸಿದೆ.

- Advertisement -

Related news

error: Content is protected !!