ತೆರವು ಮಾಡಿದರೆ ಬೃಹತ್ ವೀರಕಂಬ ಪಂಚಾಯತ್ ಚಲೊ ಮಾಡುವ ದಿನ ದೂರವಿಲ್ಲ :ಹಿಂದೂ ಮುಖಂಡ ಅಕ್ಷಯ್ ರಜಪೂತ್





ವೀರಕಂಬ : ಗ್ರಾಮ ಪಂಚಾಯತ್‌ನಿಂದ ಯಾವುದೇ ಪರವಾನಿಗೆ ಪಡೆಯದೇ ವೀರಕಂಭ ಗ್ರಾಮದ ಮಂಗಳಪದವು ಎಂಬಲ್ಲಿ ಅನಧಿಕೃತವಾಗಿ ಮಿಡ್ ನೈಟ್ ಚಿಕನ್ ಹೌಸ್ (ಹಿಂದು ಜಟ್ಕಾ ಮೀಟ್) ಎಂಬ ಹೆಸರಿನ ಕೋಳಿ ಸಾಕಾಣಿಕೆ ಮತ್ತು ಮಾರಾಟ ಕೇಂದ್ರ ನಡೆಸುತ್ತಿರುವ ಮಂಗಳ ಪದವು ನಿವಾಸಿ ಧನಂಜಯ್ ಪಾದೆ ಅವರಿಗೆ ಸೇರಿರುವ ಜಾಗದಲ್ಲಿರುವ ಈ ಅಂಗಡಿಯನ್ನು ಏಳು ದಿನದೊಳಗೆ ತೆರವು ಮಾಡಬೇಕೆಂದು ವೀರಕಂಬ ಪಂಚಾಯತ್ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಆದರೇ ಇದೇ ಪಂಚಾಯತ್ ವ್ಯಾಪ್ತಿಯಲ್ಲಿ ಅದೆಷ್ಟೋ ಅನಧಿಕೃತ ಕಟ್ಟಡ ಸರ್ಕಾರಿ / ಖಾಸಗಿ ಜಾಗದಲ್ಲಿ ನಡೆಯುತ್ತಿದ್ದು , ಅವರಿಗೆ ಯಾರಿಗೂ ತೆರವು ಮಾಡಲು ನೋಟಿಸ್ ನೀಡದೆ ಕೇವಲ ಹಿಂದೂ ಜಡ್ಕಾ ಕೋಳಿ ಅಂಗಡಿಗೆ ನೋಟಿಸ್ ನೀಡಿರುವುದು ಯಾವುದೋ ಹುನ್ನಾರದ ಭಾಗವೆಂದು ಶಂಕೆ ಉಂಟು ಮಾಡಿದೆ. ಎಲ್ಲಾ ಅನಧಿಕೃತ ಕಟ್ಟಡವನ್ನು ತೆರವು ಮಾಡದೆ ಟಾರ್ಗೆಟ್ ಮಾಡುವ ಮೂಲಕ ಕೇವಲ ಹಿಂದೂ ಜಟ್ಕಾ ಕೋಳಿ ಅಂಗಡಿಯನ್ನು ತೆರವು ಮಾಡಿದರೆ, ಸಂಪೂರ್ಣ ಹಿಂದೂ ಸಮಾಜ ಬೃಹತ್ ವೀರಕಂಬ ಪಂಚಾಯತ್ ಚಲೊ ಮಾಡುವ ದಿನ ದೂರವಿಲ್ಲ ಎಂದು ಹಿಂದೂ ಮುಖಂಡ ಅಕ್ಷಯ್ ರಜಪೂತ್ ಎಚ್ಚರಿಕೆ ನೀಡಿದ್ದಾರೆ. ಹಿಂದುಗಳ ಕಣ್ಣಿಗೆ ಸುಣ್ಣ ಉಳಿದವರಿಗೆ ಬೆಣ್ಣೆ ಹಚ್ಚುವ ಸಂಪ್ರದಾಯ ಕೈಬಿಡಬೇಕು ರಜಪೂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.