Sunday, July 19, 2026
spot_imgspot_img
spot_imgspot_img

6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ–9ನೇ ತರಗತಿ ವಿದ್ಯಾರ್ಥಿ ಅರೆಸ್ಟ್

- Advertisement -
- Advertisement -

ಅಗರ್ತಲಾ: ಹೂವುಗಳನ್ನು ತೋರಿಸುವ ನೆಪದಲ್ಲಿ 6 ವರ್ಷದ ಬಾಲಕಿಯನ್ನು ಮನೆಗೆ ಕರೆದೊಯ್ದು 9ನೇ ತರಗತಿ ವಿದ್ಯಾರ್ಥಿ ಅತ್ಯಾಚಾರವೆಸಗಿರುವ ಘಟನೆ ತ್ರಿಪುರಾದ ಖೋವಾಯ್ ಜಿಲ್ಲೆಯಲ್ಲಿ ನಡೆದಿದೆ.

ಶನಿವಾರ ಬಾಲಕಿ ತನ್ನ ಅಕ್ಕನೊಂದಿಗೆ ಮನೆಯಲ್ಲಿದ್ದಳು. ಆಕೆಯ ಪೋಷಕರು ಹುಲ್ಲು ತರಲು ಹೋಗಿದ್ದ ವೇಳೆ ನೆರೆಮನೆಯ ಬಾಲಕ ಬಂದು ಬಾಲಕಿಯನ್ನು ಹೂವುಗಳನ್ನು ತೋರಿಸುವ ನೆಪದಲ್ಲಿ ಆತನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಆಕೆಯ ಪೋಷಕರು ಹಿಂತಿರುಗಿದ ವೇಳೆ ಬಾಲಕಿ ತನ್ನ ಖಾಸಗಿ ಅಂಗ ನೋವು ಎಂದು ಹೇಳಿದ್ದು, ಈ ಹಿನ್ನೆಲೆ ಬಾಲಕಿಯ ತಾಯಿ ಆಕೆಯನ್ನು ಪರೀಕ್ಷಿಸಿದಾಗ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಬಾಲಕಿಯನ್ನು ಪ್ರಶ್ನಿಸಿದಾಗ ಆಕೆ ನಡೆದ ಘಟನೆಯ ಬಗ್ಗೆ ತಾಯಿ ಬಳಿ ಹೇಳಿಕೊಂಡಿದ್ದಾಳೆ. ತರಕಾರಿ ವ್ಯಾಪಾರ ಮುಗಿಸಿ ಬಂದ ಪತಿಯ ಬಳಿ ಪತ್ನಿ ಮಗಳ ಅತ್ಯಾಚಾರದ ಬಗ್ಗೆ ಹೇಳಿದ್ದಾಳೆ. ಮರುದಿನ ಬೆಳಗ್ಗೆ ಬಾಲಕನ ಮನೆಯವರು ಘಟನೆಯ ಬಗ್ಗೆ ಅರಿತು ಬಾಲಕಿಯ ಪೋಷಕರ ಬಳಿ ಮಗನನ್ನು ಕ್ಷಮಿಸುವಂತೆ ಬೇಡಿಕೊಂಡಿದ್ದಾರೆ ಎಂದು ಬಾಲಕಿಯ ತಂದೆ ಹೇಳಿದ್ದಾರೆ.

ಘಟನೆ ಬಳಿಕ ಆರೋಪಿ ಬಾಲಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಘಟನೆ ಸಂಬಂಧ ಪೋಕ್ಸೋ ಕೇಸ್ ದಾಖಲಿಸಿಕೊಂಡ ಪೊಲೀಸರು ಬಾಲಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!