Sunday, September 13, 2026
spot_imgspot_img
spot_imgspot_img

ಸೈಫ್ ಅಲಿ ಖಾನ್ ಹಲ್ಲೆ ಪ್ರಕರಣದ ಆರೋಪಿ ಸೆರೆ

- Advertisement -
- Advertisement -

ಮುಂಬಯಿ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ನಟನಿಗೆ ಇರಿದು ಪಲಾಯನ ಮಾಡಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪಕ್ಕದ ಥಾಣೆಯಲ್ಲೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಬಾಂದ್ರಾ ಪೊಲೀಸ್ ಠಾಣೆಗೆ ತಂದು ಪ್ರಶ್ನಿಸಿದ್ದು, ಈ ವೇಳೆ ಆತ ತಾನು ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ದನ್ನು ಒಪ್ಪಿಕೊಂಡಿದ್ದಾನೆ. ಮೂಲತಃ ಪಶ್ಚಿಮ ಬಂಗಾಳದವನಾದ ಆತ ಮುಂಬಯಿಯಲ್ಲಿ ಬೇರೆ ಬೇರೆ ಹೆಸರಿಟ್ಟುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಮೊಹಮ್ಮದ್ ಅಲಿಯನ್ ಎಂದು ಗುರುತಿಸಲಾಗಿದೆ. ಆತನನ್ನು ಸೈಫ್ ನಿವಾಸದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಕಾಸರ್ವಾಡವಲಿಯ ಹಿರಾನಂದಾನಿ ಎಸ್ಟೇಟ್ ಬಳಿ ಬಂಧಿಸಲಾಗಿದೆ. ದುಷ್ಕರ್ಮಿ ಥಾಣೆಯ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ. ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಆತ ಇಲ್ಲಿ ತನ್ನ ಹೆಸರನ್ನು ವಿಜಯ್ ದಾಸ್ ಎಂದು ಹೇಳಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ. ಗುರುವಾರ ಮುಂಜಾನೆ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಆರೋಪಿ ದಾಳಿ ನಡೆಸಿದ್ದ. ಆರು ಬಾರಿ ಇರಿತಕ್ಕೊಳಗಾಗಿದ್ದ ಸೈಫ್ ಅವರನ್ನು ಆಟೋರಿಕ್ಷಾದಲ್ಲಿ ನಗರದ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಬಳಿಕ ಅಲ್ಲಿ ಅವರಿಗೆ ಐದು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ನಡೆಸಿ ಬೆನ್ನುಮೂಳೆಯಿಂದ 2.5 ಇಂಚಿನ ಚಾಕುವಿನ ತುಂಡನ್ನುತೆಗೆಯಲಾಗಿತ್ತು. ಬೆನ್ನುಹುರಿಯಿಂದ ಬರೀ ಒಂದು ಮಿಲಿಮೀಟ‌ರ್ ಅಂತರದಲ್ಲಿ ಈ ಚಾಕುವಿನ ತುಂಡು ಇತ್ತು. ಚಾಕು ಚಾಕು ಸ್ವಲ್ಪ ಹೆಚ್ಚು ಬಿರುಸಾಗಿದ್ದರೆ ಬೆನ್ನುಹುರಿಗೆ ಗಾಯವಾಗಿ ಪರಿಸ್ಥಿತಿ ಗಂಭೀರವಾಗುತ್ತಿತ್ತು ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ. ಸದ್ಯ ಸೈಫ್ ಅಲಿ ಖಾನ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಆಕಾಶ್ ಕೈಲಾಶ್ ಕನ್ನೋಜಿಯಾ ಎಂಬ ಶಂಕಿತನನ್ನು ಛತ್ತೀಸ್‌ಗಢದ ದುರ್ಗ್ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಇದಕ್ಕೂ ಮೊದಲು ಬಾಂದ್ರಾದ ಓರ್ವ ಬಡಗಿಯನ್ನು ಆರೋಪಿ ಎಂದು ಬಂಧಿಸಿ ಪೊಲೀಸರು ಬೇಸ್ತು ಬಿದ್ದಿದ್ದರು.

- Advertisement -

Related news

error: Content is protected !!