Sunday, May 5, 2024
spot_imgspot_img
spot_imgspot_img

ಇಂಟರ್‌ನೆಟ್‌ ದ್ವೇಷದ ಕಾಮೆಂಟ್‌ಗಳಿಗೆ ನೊಂದು ಆತ್ಮಹತ್ಯೆ ಮಾಡಿಕೊಂಡ ಕಲಾವಿದ

- Advertisement -G L Acharya panikkar
- Advertisement -

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ ನಲ್ಲಿ ತನ್ನ ವಿರುದ್ಧ ಪದೇ ಪದೆ ಬರುತ್ತಿದ್ದ ದ್ವೇಷದ, ಮನನೋಯಿಸುವ ಕಾಮೆಂಟ್‌ಗಳಿಂದ ನೊಂದ ಕ್ವಿಯರ್‌ ಕಲಾವಿದರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಘಟನೆ ನಡೆದಿದ್ದು, 16 ವರ್ಷದ ಪ್ರಾಂಶು ಆತ್ಮಹತ್ಯೆ ಮಾಡಿಕೊಂಡ ಕಲಾವಿದ. ತಾಯಿಯ ದುಪಟ್ಟಾದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪ್ರಾಂಶು ಸಿನಿಮಾ ನಟ ನಟಿಯರಿಗೆ ಮೇಕಪ್ ಕಲಾವಿದರಾಗಿದ್ದರು. Instagramನಲ್ಲಿ ಮೇಕಪ್ ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ವಿಷಯವನ್ನು ಹಂಚಿಕೊಳ್ಳುತ್ತಿದ್ದ ಅವರಿಗೆ ಅಲ್ಲಿ 14,500ಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದರು. ದೀಪಾವಳಿಯ ಸಮಯದಲ್ಲಿ, ಪ್ರಾಂಶು ತಾನು ಸೀರೆ ಧರಿಸಿದ್ದ ರೀಲ್‌ನ್ನು ಪೋಸ್ಟ್ ಮಾಡಿದ್ದರು. ಅದಕ್ಕೆ ಅನೇಕ ಜನ ದ್ವೇಷಪೂರಿತ ಮತ್ತು ಹೋಮೋಫೋಬಿಕ್ (ಸಲಿಂಗಕಾಮ ದ್ವೇಷಿ) ಟೀಕೆಗಳನ್ನು ಮಾಡಿದ್ದರು.

- Advertisement -

Related news

error: Content is protected !!