- Advertisement -
- Advertisement -
ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಗುಹಾವಟಿ: ಅಸ್ಸಾಂನ ತೈಲ ಬಾವಿಯಲ್ಲಿ ಸ್ಪೋಟಗೊಂಡಿದ್ದು, ಮೂವರು ವಿದೇಶಿ ತಜ್ಞರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಟೀವನ್ ರೆನಾಲ್ಡ್ಸ್, ಡೌಗ್ ಡಲ್ಲಾಸ್ ಮತ್ತು ಕ್ರಯಿಗ್ ನೀಲ್ ಡಂಕನ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ದಿಬ್ರಗರ್ ಆಸ್ಥಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಗ್ಜಾನ್ 5ನೇ ಬಾವಿಯಲ್ಲಿ ಸ್ಪೋಟ ಸಂಭವಿಸಿದ್ದು, ಮೂವರು ವಿದೇಶಿ ತಜ್ಞರು ಗಾಯಗೊಂಡಿದ್ದಾರೆ ಎಂದು ಆಯಿಲ್ ಇಂಡಿಯಾ ಲಿಮಿಟೆಡ್ ಮಾಹಿತಿ ನೀಡಿದೆ. ಇನ್ನು ಬಗ್ಜಾನ್ ತಿನ್ಸುಕಿಯಾ ತೈಲ ಬಾವಿಯು ಗುಹಾವಟಿ ನಗರದಿಂದ 500 ಕಿ.ಮೀ ದೂರದಲ್ಲಿದೆ.ತೈಲ ಬಾವಿಯೊಳಗೆ ಹೆಚ್ಚಾಗುತ್ತಿರುವ ಬೆಂಕಿಯನ್ನು ನಂದಿಸಲು 6 ಮಂದಿ ವಿದೇಶಿ ತಜ್ಞರಯ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
- Advertisement -