





ರಾಜ್ಯದ ಆರೋಗ್ಯ ಇಲಾಖೆಯಲ್ಲಿ NHM ಅಡಿಯಲ್ಲಿ ನೇಮಕಗೊಂಡ ಆಶಾ ಮೆಂಟರ್ಸ್ ಗೆ ಸರ್ಕಾರ ಬಿಗ್ ಶಾಕ್ ನೀಡಿದೆ. 2007-08ನೇ ಸಾಲಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ತರಬೇತಿಗಾಗಿ ನೇಮಕಗೊಂಡ ಆಶಾ ಮೆಂಟರ್ಸ್ ಗಳನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನರವರ ಕಡತದಲ್ಲಿ 2007-08ನೇ ಸಾಲಿನಲ್ಲಿ NHM ಅಡಿಯಲ್ಲಿ ನೇಮಕಗೊಂಡ ಗುತ್ತಿಗೆ ನೌಕರರ ಸಿಬ್ಬಂದಿಯನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ ಆಶಾಕಾರ್ಯಕರ್ತೆಯರಿಗೆ ತರಬೇತಿ ನೀಡಲು TOT ಆಗಿ ನಿಯೋಜನೆ ಮಾಡಲಾಗಿದೆ, ಅನಂತರದಲ್ಲಿ ಅವರನ್ನು ಜಿಲ್ಲಾ ಸಮುದಾಯ ಮೊಬಿಲೈಜರ್ / ಬ್ಲಾಕ್ ಸಮುದಾಯ ಮೊಬಿಲೈಜರ್ (ASHA ಮಾರ್ಗದರ್ಶಕ) ಮರುನಾಮಕರಣ ಮಾಡಲಾಗಿರುತ್ತದೆ. ಸದರಿಯವರು ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡುವುದು, ಅವರುಗಳ ಮೇಲ್ವಿಚಾರಣೆ ಮಾಡುವುದು, ಆಶಾ ನಿಧಿ ಪೋರ್ಟಲ್ ಅನ್ನು ನಿರ್ವಹಿಸುವುದು ಹಾಗೂ ಪ್ರೋತ್ಸಾಹಧನದ ಪಾವತಿ ಪ್ರಕ್ರಿಯೆಯಂತಹ ಸಕಾಲಿಕ ನಿರ್ವಹಣೆ ಕಾರ್ಯಗಳನ್ನು ನಿರ್ವಹಿಸುತ್ತಿರುತ್ತಾರೆ.ಪ್ರಸ್ತುತ ರಾಜ್ಯದಲ್ಲಿ 195 ಆಶಾ ಮೆಂಟರ್ಸ್ (ಜಿಲ್ಲಾ ಸಮುದಾಯ ಮೊಬಿಲೈಜರ್ / ಬ್ಲಾಕ್ ಕಮ್ಯುನಿಟಿ ಮೊಬಿಲೈಜರ್) ಕಾರ್ಯನಿರ್ವಹಿಸುತ್ತಿದೆ, ಇವರುಗಳು ನಿರ್ವಹಿಸುತ್ತಿರುವ ಕಾರ್ಯಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ LHV/Sr HIO, ತಾಲ್ಲೂಕು ಮಟ್ಟದಲ್ಲಿ LHV/Sr HIO ಮತ್ತು ಜಿಲ್ಲಾ ಮಟ್ಟದಲ್ಲಿ DNO ಗಳನ್ನು ನಿರ್ವಹಿಸಬಹುದೆಂದು, ಈ ಕಾರ್ಯಗಳ ನಿರ್ವಹಣೆಗೆ LHV/Sr HIO ಮತ್ತು DNO ಗಳಿಗೆ ತರಬೇತಿ ನೀಡಬಹುದೆಂದು ಈ ಪ್ರಸ್ತುತ ರಾಜ್ಯದಲ್ಲಿ ಆಶಾ ಮಾರ್ಗದರ್ಶಕರ (ASHA ಮಾರ್ಗದರ್ಶಕರು) ಹುದ್ದೆಗಳು ಅಗತ್ಯವಿಲ್ಲವೆಂದು ಸದರಿ ಹುದ್ದೆಗಳನ್ನು ಮುಕ್ತಗೊಳಿಸುವಂತೆ ಪುಸ್ತಾಪಿಸಿರುತ್ತಾರೆ ಎಂದು ಹೇಳಿದ್ದಾರೆ.ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಬಗ್ಗೆ ಈ ಕೆಳಕಂಡಂತೆ ಸೂಚಿಸಲಾಗಿದೆ. ರಾಜ್ಯದಲ್ಲಿನ 195 ಆಶಾ ಮೆಂಟರ್ಸ್ ಆಗಿ NHM ಅಡಿಯಲ್ಲಿ ಶುಶಕರ ಅರ್ಹತೆಯಿರುವ ಗುತ್ತಿಗೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವವರ ಕರ್ತವ್ಯದಿಂದ ಮುಕ್ತಗೊಳಿಸಿದೆ. ಇವರನ್ನು ಅರ್ಹರಲ್ಲಿ ಆಯಾ ಜಿಲ್ಲೆಗಳಲ್ಲಿ NHM ಅಡಿ ಖಾಲಿ ಇರುವ ಶುಷಕರ ಹುದ್ದೆಗಳಿಗೆ ಗುತ್ತಿಗೆ ನೌಕರರಿಗೆ ಆದ್ಯತೆ ನೀಡಲಾಗುತ್ತದೆ ಪರಿಗಣಿಸಲಾಗಿದೆ ಎಂದು ನಿರ್ಧರಿಸಲಾಗಿದೆ.ಆಶಾ ಮೆಂಟರ್ಸ್‌ಗಳು ನಿರ್ವಹಿಸುತ್ತಿರುವ ಜವಾಬ್ದಾರಿಗಳನ್ನು ಇನ್ನು ಮುಂದೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಮಹಿಳಾ ಆರೋಗ್ಯ ಸಂದರ್ಶಕರು/ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ಹಾಗೂ ಉಪಕೇಂದ್ರಗಳಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು/ ಸಮುದಾಯ ಆರೋಗ್ಯ ಅಧಿಕಾರಿಗಳು ನಿರ್ವಹಿಸುವಂತೆ ಮಾಡಲಾಗಿದೆ