Tuesday, July 21, 2026
spot_imgspot_img
spot_imgspot_img

ಉಡುಪಿ : ಕೋಡಿಬೆಂಗ್ರೆ ದೋಣಿ ದುರಂತ ಪ್ರಕರಣ; ಮೂವರ ಬಂಧನ

- Advertisement -
- Advertisement -

ಉಡುಪಿ : ಕೋಡಿಬೆಂಗ್ರೆ ಸಮೀಪ ಸಮುದ್ರದಲ್ಲಿ ಸಂಭವಿಸಿದ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಪಟ್ಟಂತೆ ಬೋಟ್ ಮಾಲಕ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬೋಟ್ ಮಾಲಕ ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮದ ನಿವಾಸಿಗಳಾದ ಸುಹಾಸ್ ಶ್ರೀಯಾನ್(23) ಮತ್ತು ಸುಫಿಯಾನ್(20) ಹಾಗೂ ಬೋಟ್ ಚಾಲಕ ಕೋಡಿ ಗ್ರಾಮದ ನಿವಾಸಿ, ವಾಸು ಮೆಂಡನ್ (52) ಬಂಧಿತ ಆರೋಪಿಗಳು. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಜ. 26ರಂದು ಬೆಳಿಗ್ಗೆ ಸಂಭವಿಸಿದ ದೋಣಿ ದುರಂತದಲ್ಲಿ ಮೂವರು ಮೃತಪಟ್ಟಿದ್ದರು. ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದಿರುವುದು ಕಂಡುಬಂದಿದ್ದು, ಬೋಟ್ ಪ್ರವಾಸಿಗರ ವಿಹಾರಕ್ಕೆ ಯೋಗ್ಯವಾಗಿದೆ ಎಂಬ ದೃಢೀಕರಣ ಪತ್ರವನ್ನೂ ಹೊಂದಿರಲಿಲ್ಲ. ಪ್ರವಾಸಿಗರನ್ನು ಕರೆದುಕೊಂಡು ಹೋದ ಸಂದರ್ಭದಲ್ಲಿಯೂ ಯಾವುದೇ ಮುಂಜಾಗೃತಾ ಕ್ರಮಗಳನ್ನು ಅನುಸರಿಸದೆ ಇರುವುದು ಕೂಡ ತನಿಖೆ ವೇಳೆ ಬಯಲಾಗಿದೆ.

ಆರೋಪಿಗಳ ವಿರುದ್ಧ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದ ಸೆಕ್ಷನ್ ನಡಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!