Sunday, October 6, 2024
spot_imgspot_img
spot_imgspot_img

ಪುತ್ತೂರು: ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ, ಕೊಲೆ ಯತ್ನ : ಆರೋಪಿ ಬಂಧನ

- Advertisement -
- Advertisement -

ಪುತ್ತೂರು : ಗಲಾಟೆ ವಿಷಯವಾಗಿ ಕರೆ ಬಂದ ಹಿನ್ನಲೆ ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಘಟನೆ ಪುತ್ತೂರಿನ ಬನ್ನೂರು ಗ್ರಾಮದ ಕಂಜೂರು ಎಂಬಲ್ಲಿ ನಡೆದಿದೆ.

ಬನ್ನೂರು ಗ್ರಾಮದ ಕಂಜೂರು ನಿವಾಸಿ ತೇಜಸ್ ಬಂಧಿತ.

ಜು.26 ರಂದು ರಾತ್ರಿ ವೇಳೆ ಜಿಲ್ಲಾ ಕಂಟ್ರೋಲ್ ರೂಮ್ ನಿಂದ ಇವೆಂಟ್ ಬಂದಿದ್ದು, ಇವೆಂಟ್‌ನಲ್ಲಿ ಬಂದಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಘಟನಾ ಸ್ಥಳವನ್ನು ಖಚಿತ ಪಡಿಸಿಕೊಂಡು ಘಟನಾ ಸ್ಥಳವಾದ ಪುತ್ತೂರು ಬನ್ನೂರು ಗ್ರಾಮದ ಕಂಜೂರು ಎಂಬಲ್ಲಿ ತೇಜಸ್ ಎಂಬವರು ತನ್ನ ತಾಯಿಯೊಂದಿಗೆ ಗಲಾಟೆ ಮಾಡುತ್ತಿದ್ದು, ತೇಜಸ್‌ನ ತಾಯಿ ಚಂದ್ರಾವತಿಯವರು ಪಕ್ಕದ ಮನೆಗೆ ಬಂದಿರುವುದಾಗಿ ತಿಳಿಸಿದ್ದು, ಆಗ ಪೊಲೀಸ್ ಸಿಬ್ಬಂದಿ ಚಂದ್ರಾವತಿಯವರನ್ನು ವಿಚಾರಿಸುತ್ತಿರುವಾಗ ತೇಜಸ್‌ನು ಆತನ ಮನೆಯಿಂದ ಪೊಲೀಸರನ್ನು ನೋಡಿ ಅವಾಚ್ಯವಾಗಿ ಬೈದು, ಆತನ ಮನೆಯ ಅಂಗಳದಲ್ಲಿದ್ದ ಪೋರ್ಡ್ ಕಾರನ್ನು ತುರ್ತು ಸ್ಪಂದನಾ ( ಇಆರ್‌ಎಸ್‌ಎಸ್) ವಾಹನಕ್ಕೆ ಅಡ್ಡವಾಗಿ ನಿಲ್ಲಿಸಿದ್ದಾನೆ.

ಪೊಲೀಸ್ ಸಿಬ್ಬಂದಿಯು ಆತನಲ್ಲಿ ಕಾರನ್ನು ರಸ್ತೆಯಿಂದ ತೆಗೆಯಲು ಹೇಳಿದಾಗ ಆತನು ಕಾರನ್ನು ತೆಗೆಯಲು ನಿರಾಕರಿಸಿದ್ದು, ಕೂಡಲೇ ಈ ವಿಚಾರವನ್ನು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಪುತ್ತೂರು ನಗರ ಠಾಣಾ ಎಎಸ್‌ಐ ಮೋನಪ್ಪ ರವರಿಗೆ ಕರೆಮಾಡಿ ಘಟನಾ ಸ್ಥಳಕ್ಕೆ ಬರುವಂತೆ ತಿಳಿಸಿದ್ದು, ಅವರು ಹೈವೇ ಪೆಟ್ರೋಲ್ ವಾಹನದಲ್ಲಿ ಸ್ಥಳಕ್ಕೆ ಬಂದಿದ್ದು, ಎಎಸ್‌ಐ ಮೋನಪ್ಪ, ಸಿಬ್ಬಂದಿಗಳು ತೇಜಸ್‌ನ ಮನೆಯ ಅಂಗಳಕ್ಕೆ ಹೋಗಿ ಕಾರಿನ ಕೀಯನ್ನು ಕೊಡುವಂತೆ ಆತನಲ್ಲಿ ಕೇಳಿದಾಗ, ಆತನು ಕೀಯನ್ನು ಕೊಡದೇ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಮನೆಯ ಒಳಗಿನಿಂದ ಒಂದು ಸ್ಟೀಲ್ ರಾಡನ್ನು ಹಿಡಿದುಕೊಂಡು ಬಂದು ಏಕಾಏಕಿಯಾಗಿ ರಾಡ್‌ನಿಂದ ಬಲವಾಗಿ ಪಿಸಿ ವಿನಾಯಕರವರ ತಲೆಗೆ ಹೊಡೆಯಲು ಬೀಸಿದ್ದು, ವಿನಾಯಕ ರವರು ರಾಡ್‌ನ ಹಲ್ಲೆಯಿಂದ ತಪ್ಪಿಸಿಕೊಂಡಾಗ ರಾಡ್‌ ಏಟು ಅವರ ಬಲ ಭುಜಕ್ಕೆ ಬಿದ್ದಿರುತ್ತದೆ.

ಎಲ್ಲರೂ ಸೇರಿ ತೇಜಸ್‌ನ ಕೈಯಲ್ಲಿದ್ದ ರಾಡನ್ನು ಎಳೆದು ತೆಗೆದುಕೊಂಡಿದ್ದು, ಆಗ ತೇಜಸ್‌ನು ತನ್ನ ಕೈಯಿಂದ ಪಿಸಿ ವಿನಾಯಕ ಹಾಗೂ ಇನ್ನೋರ್ವ ಪಿಸಿಗೆ ಹಲ್ಲೆ ನಡೆಸಿದ್ದು, ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ಬೈದು, ಪೊಲೀಸ್ ವಾಹನಕ್ಕೆ ಕಾರನ್ನು ಅಡ್ಡವಾಗಿ ನಿಲ್ಲಿಸಿ, ಜೀವ ಬೆದರಿಕೆ ಹಾಕಿ, ಪೊಲೀಸ್‌ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿರುವಾಗ ಸಾರ್ವಜನಿಕ, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ಮಾಡಿ, ಕೊಲ್ಲಲು ಪ್ರಯತ್ನಿಸಿದ ತೇಜಸ್‌ನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ:68/2024 ಕಲಂ: 352,351,126(2),132,121(1), 109,115(2),118 2,ಬಿ,ಎನ್‌,ಎಸ್‌ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!