Friday, May 17, 2024
spot_imgspot_img
spot_imgspot_img

ಯುವಕನ ಬಾಯಿಗೆ ಚಪ್ಪಲಿ ತುರುಕಿ ಹಲ್ಲೆಗೈದ ಮಹಿಳಾ ಉದ್ಯಮಿ & ಟೀಂ!

- Advertisement -G L Acharya panikkar
- Advertisement -

ದಲಿತ ಯುವಕನ ಮೇಲೆ ಹಲ್ಲೆ ಹಾಗೂ ಆತನ ಬಾಯಿಗೆ ಚಪ್ಪಲಿ ತುರುಕಿದ ಆರೋಪದ ಮೇಲೆ ಮಹಿಳಾ ಉದ್ಯಮಿ ಜೊತೆ 6 ಮಂದಿಯ ವಿರುದ್ಧ ಗುಜರಾತ್‍ನ ಮೊರ್ಬಿ ನಗರದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೃತ್ಯ ಎಸಗಿದ ಮಹಿಳಾ ಉದ್ಯಮಿಯನ್ನು ವಿಭೂತಿ ಪಟೇಲ್ ಅಕಾ ರಾಣಿಬಾ ಎಂದು ಗುರುತಿಸಲಾಗಿದೆ.

ವಿಭೂತಿ ಪಟೇಲ್ ಅಕಾ ರಾಣಿಬಾ ಕಂಪನಿಯಲ್ಲಿ 21 ವರ್ಷದ ದಲಿತ ಯುವಕ ನಿಲೇಶ್ ದಲ್ಸಾನಿ 15 ದಿನ ಕೆಲಸ ಮಾಡಿದ್ದನು. ಅಂತೆಯೇ ಆತ ಸಂಬಳಕ್ಕೆ ಬೇಡಿಕೆ ಇಟ್ಟಿದ್ದಕ್ಕಾಗಿ ಮಹಿಳಾ ಉದ್ಯಮಿಯು ಯುವಕನ ಬಾಯಿಗೆ ಚಪ್ಪಲಿ ತುರುಕಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾಳೆ.
ಈ ಸಂಬಂಧ ಸಂತ್ರಸ್ತ ನಿಲೇಶ್ ದಲ್ಸಾನಿಯಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಮೊರ್ಬಿ ನಗರದ ಪೊಲೀಸರು ವಿಭೂತಿ ಪಟೇಲ್ ಅಕಾ ರಾಣಿಬಾ ಮತ್ತು ಆಕೆಯ ಸಹೋದರ ಓಂ ಪಟೇಲ್ ಮತ್ತು ಮ್ಯಾನೇಜರ್ ಸೇರಿದಂತೆ ಇತರರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

- Advertisement -

Related news

error: Content is protected !!