Friday, April 26, 2024
spot_imgspot_img
spot_imgspot_img

ಆರ್​ಎಸ್​ಎಸ್ ಕಚೇರಿಗೆ ಭೇಟಿ ನೀಡಿದ್ದ ಆಸ್ಟ್ರೇಲಿಯಾ ರಾಯಭಾರಿಗೆ ಸಂಕಷ್ಟ !

- Advertisement -G L Acharya panikkar
- Advertisement -

ನವದೆಹಲಿ: ಕಳೆದ ತಿಂಗಳು ಅಂದ್ರೆ ನವೆಂಬರ್ 15 ರಂದು ಮಹಾರಾಷ್ಟ್ರದ ನಾಗ್​ಪುರದಲ್ಲಿರುವ ಆರ್​ಎಸ್​ಎಸ್​ ಕಚೇರಿಗೆ ಆಸ್ಟ್ರೇಲಿಯಾದ ರಾಯಭಾರಿ ಬ್ಯಾರಿ ಒ’ಫ್ಯಾರೆಲ್ ಪತ್ನಿ ಸಮೇತ ಭೇಟಿ ನೀಡಿದ್ದರು. ಅಲ್ಲದೇ ಭೇಟಿಯ ಕುರಿತಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋಗಳನ್ನೂ ಹಂಚಿಕೊಂಡಿದ್ದರು.

ಇದೀಗ ಆರ್​ಎಸ್​ಎಸ್​ ಕಚೇರಿಗೆ ಭೇಟಿ ನೀಡಿದ ಕಾರಣಕ್ಕೆ ಬ್ಯಾರಿ ಒ’ಫ್ಯಾರೆಲ್​​ಗೆ ಸಂಕಷ್ಟ ಶುರುವಾಗಿದೆ. ಆಸ್ಟ್ರೇಲಿಯಾದ ಪಾರ್ಲಿಮೆಂಟ್​ನಲ್ಲಿ ಅಲ್ಲಿನ ಸೆನೆಟ್ ಜ್ಯಾನೆಟ್ ರೈಸ್ ಎಂಬುವವರು ಬ್ಯಾರಿ ಒ’ಫ್ಯಾರೆಲ್​ರ ಆರ್​ಎಸ್​ಎಸ್​ ಕಚೇರಿಗೆ ಭೇಟಿ ನೀಡಿದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.


ಆರ್​ಎಸ್​ಎಸ್​ ಸಂಘಟನೆಯ ಸಿದ್ಧಾಂತಗಳ ವಿರುದ್ಧ ಹಲವು ಆರೋಪಗಳನ್ನು ಮಾಡಿರುವ ಜ್ಯಾನೆಟ್ ರೈಸ್. ಆರ್​ಎಸ್​ಎಸ್​ ಕಚೇರಿಗೆ ಭೇಟಿ ನೀಡಿ ಅದರ ಸರಸಂಘಚಾಲಕರನ್ನು ಭೇಟಿಯಾಗಿರುವ ಬ್ಯಾರಿ ಒ’ಫ್ಯಾರೆಲ್ ಅವರರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ಆನ್​ಲೈನ್​ನಲ್ಲಿ ಬ್ಯಾರಿ ಒ’ಫ್ಯಾರೆಲ್ ರಾಜೀನಾಮೆ ವಿಚಾರಕ್ಕೆ ಸಹಿ ಹಾಕುವಂತೆ ಆಂದೋಲನ ನಡೆಸಿದ್ದಾರೆ.

- Advertisement -

Related news

error: Content is protected !!