Sunday, October 6, 2024
spot_imgspot_img
spot_imgspot_img

SPECIAL:- ಆಟಿ ತಿಂಗಳ- ಆಟಿ ಕಳೆಂಜ.

- Advertisement -
- Advertisement -

ಕೃಪೆ ಭರತ್ ರಾಜ್ , ವರದಿ-ಕಿರಣ್ ಕೋಟ್ಯಾನ್ ಕೇಪು

ಆಷಾಡಮಾಸವನ್ನು ತುಳುನಾಡಿನಲ್ಲಿ ಆಟಿ ಅಂತಾ ಕರೀತಾರೆ. ಆಟಿ ಮಾಸವನ್ನು ಬಿಟ್ಟು ಎಲ್ಲಾತಿಂಗಳುಗಳು ದೈವ ದೇವರ ಆರಾಧನೆ ನಡೆಯುತ್ತೆ. ಆದ್ರೆ ಆಟಿ ಮಾಸದಲ್ಲಿ ದೈವ ದೇವರ ಆಟಕ್ಕಿಂತ ಮಾರಿಯಾಟವೇ ಹೆಚ್ಚಂತೆ. ಇದ್ರಿಂದ ಪ್ರತಿವರ್ಷ ಆಟಿ ತಿಂಗಳಲ್ಲಿ ತುಳುನಾಡಿನ ಹಳ್ಳಿ ಹಳ್ಳಿಗಳಲ್ಲಿ ವಿಶಿಷ್ಟ ರೀತಿಯ ಆಚರಣೆ ನಡೆಯುತ್ತೆ.ಅದು ಮಾರಿ ಓಡಿಸೋ ಹಬ್ಬ. ಈ ವೇಳೆ ಪ್ರತಿ ಮನೆಗೆ ಒಬ್ಬಅತಿಥಿ ಬರುತ್ತಾರೆ. ಅದು ಯಾರು. ಆ ಆಚರಣೆ ಹೇಗಿರುತ್ತೆ ಅಂತಾ ನೋಡಬೇಕಾ. ಹಾಗಾದ್ರೆ ಈ ಸ್ಟೋರಿ ನೋಡಿ.

ದೈವಾರಾಧನೆ, ಭೂತಕೋಲ, ಯಕ್ಷಗಾನ ಹೀಗೆ ವಿಶಿಷ್ಟ ಆಚರಣೆಗಳ ತವರು ಕರ್ನಾಟಕದ ಕರಾವಳಿ.ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಆಚರಣೆಗಳು ಐತಿಹ್ಯದ ನೆಲೆಗಟ್ಟಿನಲ್ಲಿ ಆಧುನಿಕತೆಯ ಲೇಪನವಾಗಿ ಇಂದಿಗೂ ಹಚ್ಚಹಸುರಾಗಿದೆ. ತುಳುನಾಡಿನ ಜನರಿಗೆ ದೈವದೇವರುಗಳ ಮೇಲೆ ಭಾರೀ ಭಕ್ತಿ. ಅಷ್ಟೆ ಭೀತಿ. ಆಷಾಡಮಾಸವನ್ನು ಕಡಲ ತಡಿಯ ಜನರು ಆಟಿಮಾಸ ಅಂತಾ ಕರೆಯುತ್ತಾರೆ. ಈ ಮಾಸದಲ್ಲಿ ಹಲವು ವೈಶಿಷ್ಟತೆಗಳು ತುಳುನಾಡಿನಲ್ಲಿ ನಡೆಯುತ್ತೆ. ಇದರಲ್ಲಿ ನಶಿಸಿಹೋಗುತ್ತಿರುವ ಆಚರಣೆ ಅಂದ್ರೆ ಅದು ಆಟಿ ಕಳಂಜ. ಹೌದು ವರ್ಷವಿಡೀ ದೈವ ದೇವರುಗಳು ಅಭಯ ಹಸ್ತದಲ್ಲಿಜೀವಿಸುವ ಜನರಿಗೆ ಆಟಿ ಮಾಸ ಅಂದ್ರೆ ಏನೋ ಒಂಥಾರ ಥಳಮಳ. ಯಾಕಂದ್ರೆ ಆಟಿ ಮಾಸದಲ್ಲಿ ದೈವ ದೇವರಗಳ ಜಾಗವನ್ನು ಮಾರಿ ಆವರಿಸಿರುತ್ತೆ ಅನ್ನೊದು ಇಲ್ಲಿನವರ ನಂಬಿಕೆ. ಅದಕ್ಕಾಗೆ ಪ್ರತಿ ಮನೆಯವರು ಒಬ್ಬ ಅತಿಥಿಯನ್ನುಎದುರು ನೋಡುತ್ತಾರೆ ಆ ಅತಿಥಿ ಯಾರು ಗೊತ್ತೊ ನೀವು ನೋಡಿ.

ಮೂಗಿನ ಕೆಳಗೆ ದಪ್ಪದ ಮೀಸೆ, ಮುಖಕ್ಕೆ ಹಾಗೂಮೈ ಪೂರ್ತಿ ಲೇಪನ, ಕಾಲಿಗೆ ಸಣ್ಣ ಗೆಜ್ಜೆ, ಸೊಂಟದಲ್ಲಿ ಕೆಂಪು ಬಿಳಿ ಪಟ್ಟಿಯ ಬಟ್ಟೆ, ಅದರ ಮೇಲೆ ತೆಂಗಿನ ಎಲೆಯಗರಿ, ಗರಿ ಸೀಳುಗಳಿಂದ ತಯಾರಿಸಲಾದ ಜಾಲರಿಯಂಥ ಅಲಂಕಾರ, ತಲೆಗೆ ಕಂಗಿನ ಹಾಳೆಯಿಂದ ರೂಪಿಸಲಾದ ಮುಂಡಾಸು, ತೆಂಗಿನನ ಗರಿಯಿಂದ ಮಾಡಿದ ಹೆಡೆಪಟ್ಟಿ, ತಲೆಗೆ ಮುಂದಲೆ, ಮುಂದಲೆಗೆ ಕೇಪುಲ ಹೂವಿನಅಲಂಕಾರ, ತೋಳಬಂಧಿ, ಕೈ ಕಟ್ಟುಗಳು. ಇಂಥಹ ವೇಷಭೂಷಣನದಲ್ಲಿ ಬರುವ ಈ ಅತಿಥಿಯೇ ಆಟಿ ಕಳೆಂಜ. ಈ ಅತಿಥಿ ಬರೋದು ಮನೆಯಲ್ಲಿ ಅಡಗಿರುವ ಮಾರಿನ್ನು ಓಡಿಸಲು. ಹೌದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಇಂಥದ್ದೊಂದು ವಿಶಿಷ್ಟ ಆಚರಣೆಚಾಲ್ತಿಯಲ್ಲಿದೆ.

ಆಟಿ ಕಳೆಂಜ ಬರುವಂಥ ಸಂಪ್ರದಾಯ ಇವತ್ತಿನದ್ದಲ್ಲ. ನೂರಾರು ವರ್ಷಗಳ ಇತಿಹಾಸವಿದೆ. ತುಳುನಾಡಿನಲ್ಲಿ ನೂರಾರು ವರ್ಷಗಳ ಇತಿಹಾಸ ಇರುವ ಇಂದಿಗೂ ಜೀವಂತ ವಾಗಿದೆ ಅದರಲ್ಲಿ ಆಟಿ ಕಳಂಜವು ಒಂದು. ಹಿಂದಿನ ಕಾಲದಲ್ಲಿ ಆಷಾಡ ತಿಂಗಳು ಅಂದರೆ ಮಹಾ ಮಳೆಯಾಗಿ ನೆರೆ ಆಗುವ ಸಮಯ .‌ ಮಹಾಮಳೆಯಿಂದ ಮನೆಯಿಂದ ಹೊರಗೆ ಬಾರದ ಪರಿಸ್ಥಿತಿ ಉಂಟಾಗುತ್ತಿತ್ತು. ಈ ಸಮಯದಲ್ಲಿ ಗ್ರಾಮಿಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿತ್ತು. ಕೃಷಿಯಲ್ಲಿ ತೊಡಗಿಸಿಕೊಳ್ಳುವಿಕೆ ಮತ್ತು ಅತಿಯಾದ ಮಳೆಯಿಂದಾಗಿ ಜನರು ಮಹಾಮಾರಿ ರೋಗಗಳಿಗೆ ಜನರು ತತ್ತರಿಸಿಹೋಗುತ್ತಿದ್ದರು. ಆಗ ದೇವರಲ್ಲಿ ಜನರೆಲ್ಲಾ ದೇವರಲ್ಲಿ ಪ್ರಾರ್ಥಿಸಿದರು. ಆಗ ಹುಟ್ಟಿಕೊಂಡಿದ್ದೇ ಈ ಆಟಿ ಕಳೆಂಜ ಎಂಬ ವಿಶಿಷ್ಟ ಸಂಪ್ರದಾಯ. ಆಟಿ ಅಂದರೆ ಮಳೆ ಸುರಿಯುವ ದಿನ ಎಂಬರ್ಥ.

ಅಟಿ ತಿಂಗಳ- ಆಟಿ ಕಳೆಂಜ.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಇಂಥದ್ದೊಂದು ವಿಶಿಷ್ಟ ಆಚರಣೆ ಆಟಿ ಕಳೆಂಜ.

Posted by VTV on Thursday, 23 July 2020

ಈ ವೇಳೆ ಎದುರಾಗುವ ಸಂಕಷ್ಟಗಳ ಪರಿಹಾರಕ್ಕಾಗಿ ಈಶ್ವರ ದೇವರು ತನ್ನ ಬಲಕಾಲಿನ ಕಿರು ಬೆರಳಿನ ಉಗುರಿನೆಡೆಯಲ್ಲಿರುವ ಮಣ್ಣಿನಿಂದ ಆಟಿ ಕಳೆಂಜನನ್ನು ಸೃಷ್ಟಿಸಿದ ಎಂಬ ನಂಬಿಕೆ ಜನರದ್ದು.ಈಶ್ವರನ ಆದೇಶದಂತೆ ಕಳೆಂಜ ಮನೆ ಮನೆಗೆ ಭೇಟಿ ಕೊಟ್ಟು, ಜನರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸು ಅಂತಾ ಆಟಿ ಕಳೆಂಜ ದೈವದಲ್ಲಿ ಮೊರೆ ಇಡುತ್ತಾನೆ.ಇದರಿಂದಾಗಿ ಯಾವ ರೋಗ ರುಜಿನಗಳು ಬರುವುದಿಲ್ಲ.ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಜನರದ್ದು.ಹಾಗಾಗಿ ಮನೆಯಂಗಳಕ್ಕೆ ಬಂದು ಕುಣಿಯುವ ಆಟಿ ಕಳೆಂಜನಿಗೆ ತುಳುನಾಡಿನಲ್ಲಿ ವಿಶೇಷ ಪ್ರಾಧಾನ್ಯತೆ ಇದೆ.ಪ್ರತಿ ಮನೆ ಮನೆಗೂ ಬರುವ ಆಟಿ ತಿಂಗಳ ಅತಿಥಿಗೆ ಮನೆಯೊಡತಿ ಗರಸೆಯಲ್ಲಿ ಭತ್ತ, ಅಕ್ಕಿ, ಉಪ್ಪು, ಮೆಣಸು,ಅರಿನಗಳನ್ನು ದಾನದ ರೂಪದಲ್ಲಿ ಕೊಡುತ್ತಾಳೆ. ಕಳೆಂಜನ ತಲೆಗೆ ಪ್ರದಕ್ಷಿಣೆ ಮಾಡಿ ಪ್ರಾರ್ಥಿಸುತ್ತಾರೆ.

ನಲಿಕೆ  ಜನಾಂಗದ 10 ರಿಂದ 16 ವರ್ಷದ ಹುಡುಗರೇ ಆಟಿ ಕಳೆಂಜನ ವೇಷ ಧರಿಸುವುದು ವಿಶೇಷ.ಕಳೆಂಜ ಅಂದರೆ ಸಣ್ಣ ಬಾಲಕ, ದುಷ್ಟ ಶಕ್ತಿಗಳನ್ನು ಹೊಡೆದೋಡಿಸುವ ಮಾಂತ್ರಿಕ ಎಂಬ ಅರ್ಥ ಕೂಡ ಇದೆ.ಕಳೆಂಜನು ಊರಿಗೆ ಬಂದ ಮಾರಿಯನ್ನು ಹೊಡೆದೋಡಿಸುತ್ತಾನೆ ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ ಆಟಿ ಕಳೆಂಜನನ್ನು ಮನೆಗೆ ಆಹ್ವಾನಿಸಿ ದಾನ ನೀಡುತ್ತಾರೆ ತುಳು ನಾಡಿನ ಮಂದಿ. ಇನ್ನು ಇತ್ತೀಚಿನ ದಿನಗಳಲ್ಲಿ ಆಟಿಕಳೆಂಜನ ಪಾತ್ರ ಧರಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ.ಆದರೆ ಗ್ರಾಮೀಣ ಪ್ರದೇಶಗಳಲ್ಲಿನ ಜನರು ಮಾತ್ರ ಇದುವರೆಗೂ ಇದನ್ನು ಬಿಟ್ಟಿಲ್ಲ. ಆದ್ರೆ ಕೆಲ ಗ್ರಾಮಗಳಲ್ಲಿಇಂತಹ ಸಾವಿರಾರು ವರ್ಷ ಇತಿಹಾಸ ಇರುವ ಈ ಆಟಿಕಳಂಜೆ ಸಂಸ್ಕೃತಿಯನ್ನು ಉಳಿಸಿ ಕೊಂಡು ಬಂದಿರುವುದು ನಿಜಕ್ಕೂ ಶ್ಲಾಘನೀಯ.

ಆದರೆ ಈ ವರ್ಷ ಮಾಹಮಾರಿ‌ ಕೊರೊನಾ ಎಂಬ ಮಾರಕ ರೋಗ ಬಂದಿರುವುದರಿಂದ ಹಾಗೂ ದೇಶದಲ್ಲಿ ಲಾಕ್ ಡೌನ್ ಇರುವ ಈ ಸಂದರ್ಭದಲ್ಲಿ ನಮ್ಮ ಸಾವಿರಾರು ವರ್ಷ ಇತಿಹಾಸ ಇರುವ ಈ ಆಟಿಕಳಂಜೆ ಸಂಸ್ಕೃತಿ ಇಲ್ಲಿಗೆ ನಿಲ್ಲಬಹುದ ಎಂದು ಕೆಲವರಿಗೆ ಭಯ.ಈ ರೋಗವು ಅದಷ್ಟು ಬೇಗ ಕಮ್ಮಿಯಾಗಲಿ ,ಆದರೆ ಈ ಬಾರಿ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಕಳಂಜನೂ ಹೊರಗಿಳಿಯದಂತಾಗಿದೆ.ನಮ್ಮ ಮಂದಿನ ತಲೆಮಾರು ಇರುವ ವರಗೆ ಈ ಜಾನಪದ ಕಲೆ ಯನ್ನೂ ಉಳಿಸುವಂತಹ ಆಗಬೇಕು.  ಆಟಿಕಳಂಜೆ ಕಲೆಯನ್ನು ಉಳಿಸಿ ಕೊಂಡು ಬಂದಿರುವುದು ನಿಜಕ್ಕೂ ಶ್ಲಾಘನೀಯ..

ಕೃಪೆ ಭರತ್ ರಾಜ್ , ವರದಿಕಿರಣ್ ಕೋಟ್ಯಾನ್ ಕೇಪು

- Advertisement -

Related news

error: Content is protected !!