Saturday, May 18, 2024
spot_imgspot_img
spot_imgspot_img

ಎಟಿಎಂ ಹಣ ವಿತ್​​​​ ಡ್ರಾ ಚಾರ್ಜ್​​​ ಹೆಚ್ಚಿಸಿದ ಆರ್​ಬಿಐ; ಆಗಸ್ಟ್​ 1ರಿಂದ ಹೊಸ ರೂಲ್ಸ್ ಜಾರಿ

- Advertisement -G L Acharya panikkar
- Advertisement -

ಇತ್ತೀಚೆಗಷ್ಟೆ ಕೊರೊನಾ ಲಾಕ್​ಡೌನ್​ನಿಂದ ಸುಧಾರಿಸಿಕೊಳ್ಳುತ್ತಿರುವ ಸಾರ್ವಜನಿಕರಿಗೆ ಭಾರತೀಯ ರಿಸರ್ವ್​​​​ ಬ್ಯಾಂಕ್​​​ ಶಾಕ್​​ ನೀಡಿದೆ.

ಮುಂದಿನ ದಿನಗಳಲ್ಲಿ ಬಳಕೆದಾರ ತನ್ನ ಬ್ಯಾಂಕ್​​​ನಲ್ಲಿ ಅಲ್ಲದೇ ಇತರೆ ಬ್ಯಾಂಕ್​​ನಲ್ಲಿ ಎಟಿಎಂ ಮೂಲಕ ಹಣ ಡ್ರಾ ಮಾಡಿದರೆ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.

ಬೇರೆ ಬ್ಯಾಂಕುಗಳ ಎಟಿಎಂನಲ್ಲಿ ಹಣ ವಿತ್​​ಡ್ರಾ ಮಾಡುವಾಗ ಚಾರ್ಜ್​​ ಮಾಡುವ ಶುಲ್ಕವನ್ನು ಹೆಚ್ಚಿಸಿ ಆದೇಶಿಸಿದೆ. ಈ ನಿಯಮವೂ ಆಗಸ್ಟ್​ 1ರಿಂದಲೇ ಜಾರಿಯಾಗಲಿದೆ.

ಒಂದು ತಿಂಗಳಿಗೆ ನಿಮ್ಮ ಬ್ಯಾಂಕ್​​ ಅಲ್ಲದೇ ಬೇರೆ ಬ್ಯಾಂಕ್​​ನಲ್ಲಿ ಎಟಿಎಂ ಮೂಲಕ 5 ಬಾರಿ ಮಾತ್ರ ಹಣ ಡ್ರಾ ಮಾಡಬಹುದು ಎಂಬುದು ಸದ್ಯಕ್ಕಿರುವ ಆರ್​ಬಿಐ ನಿಯಮ.

ಆರನೇ ಬಾರಿಗೆ ಡ್ರಾ ಮಾಡಿದರೆ 20 ರೂಪಾಯಿ ಚಾರ್ಜ್​​ ಮಾಡಲಾಗುತ್ತಿತ್ತು. ಆದರೀಗ, ಹೊಸ ನಿಯಮದ ಪ್ರಕಾರ ಈ ಶುಲ್ಕವನ್ನು 21 ರೂಪಾಯಿಗೆ ಏರಿಸಲಾಗಿದೆ.

ಇನ್ನು, ಆರ್​​ಬಿಐ ಹಣಕಾಸೇತರ ಶುಲ್ಕವನ್ನು 5 ರೂಪಾಯಿಗಳಿಂದ 6 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಹಾಗೆಯೇ 16 ರೂಪಾಯಿ ಇದ್ದ ಇಂಟರ್​ಚೇಂಜ್​​​ ಶುಲ್ಕವನ್ನು 17 ರೂಪಾಯಿಗೆ ಏರಿಸಿದೆ. ಈ ಪರಿಷ್ಕೃತ ಶುಲ್ಕ ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ.

- Advertisement -

Related news

error: Content is protected !!