


ಹಾಸನ: ದುಷ್ಕರ್ಮಿಗಳು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಅರಕಲಗೂಡು ತಾಲೂಕಿನ ಅರೆಮಾದನಹಳ್ಳಿ ಬಳಿ ನಡೆದಿದೆ. ಹಲ್ಲೆಗೊಳಗಾದದ ಯುವಕನನ್ನು ವಿಜಾಪುರ ಎರಡನೇ ಕಾಲೋನಿ ನಿವಾಸಿ ಪುನೀತ್ ಕುಮಾರ್ (19) ಎನ್ನಲಾಗಿದೆ.
ಇದನ್ನೂ ಓದಿ: ಮಂಗಳೂರು: ಅಪಘಾತಕ್ಕೆ ಸಂಬಂಧಿಸಿ ವಾಗ್ವಾದ- ಪೊಲೀಸರಿಂದ ಲಘು ಲಾಠಿ ಪ್ರಹಾರ
ಪುನೀತ್ ಕುಮಾರ್ ಬುಧವಾರ ಕೊರೊನಾ ಲಸಿಕೆ ಪಡೆದು ಊರಿಗೆ ತೆರಳುವ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಕು, ಕತ್ತಿ, ಬಿಯರ್ ಬಾಟಲ್‌ಗಳಿಂದ ತೀವ್ರ ಹಲ್ಲೆ ನಡೆಸಿದ್ದು, ಸದ್ಯ ಪುನೀತ್ ಕೋಮಾ ಸ್ಥಿತಿ ತಲುಪಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ವಿಟ್ಲ: ಸ್ವಾತಂತ್ರ‍್ಯ ಹೋರಾಟಗಾರ, ಹಿರಿಯ ಉದ್ಯಮಿ ಡಿ.ಕೆ.ಮಹಮ್ಮದ್ ಹಾಜಿ ಕಾಂತಡ್ಕ ವಿಧಿವಶ
ದುಷ್ಕರ್ಮಿಗಳು ಹಳೇ ದ್ವೇಷದ ಹಿನ್ನೆಲೆಯಲ್ಲಿ ಈರೀತಿ ಮಾಡಿದ್ದಾರೆ ಎಂದು ಪುನೀತ್ ಸಹೋದರ ಆರೋಪಿಸಿದ್ದಾರೆ. ಆರೋಪಿಗಳನ್ನು ಅರೆಮಾದನಹಳ್ಳಿಯ ಪ್ರದೀಪ್, ಮಧು, ದಿಲೀಪ್, ಪ್ರಜ್ವಲ್ ಎನ್ನಲಾಗಿದ್ದು, ಘಟನೆ ಸಂಬ0ಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೈಸೂರು: ಗ್ಯಾಂಗ್ ರೇಪ್ ಪ್ರಕರಣ; ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಸಂತ್ರಸ್ತೆ ಸ್ನೇಹಿತ











