Sunday, April 28, 2024
spot_imgspot_img
spot_imgspot_img

ಪುತ್ತೂರು: ಪತ್ರಕರ್ತ ನಿಶಾಂತ್ ಬಿಲ್ಲಂಪದವು ಮೇಲೆ ದಾಳಿ: ಮೊಬೈಲ್ ಪುಡಿಗೈದ ದುಷ್ಕರ್ಮಿಗಳು ಜರ್ನಲಿಸ್ಟ್ ಯೂನಿಯನ್ ಖಂಡನೆ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ: ಪ್ರತಿಭಟನೆಯ ಎಚ್ಚರಿಕೆ

- Advertisement -G L Acharya panikkar
- Advertisement -

ಪುತ್ತೂರು: ಅಪಾಯಕಾರಿ ರೀತಿಯಲ್ಲಿ ಮರದ ಗೆಲ್ಲುಗಳನ್ನು ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಕಡಿಯುತ್ತಿದ್ದ ಮೆಸ್ಕಾಂ ಸಿಬ್ಬಂದಿಗಳ ವಿಡಿಯೋ ಚಿತ್ರೀಕರಿಸುತ್ತಿದ್ದ ಪತ್ರಕರ್ತರೊಬ್ಬರ ಮೊಬೈಲನ್ನು ಕಸಿದು ದುಷ್ಕರ್ಮಿಯೊಬ್ಬ ನೆಲಕ್ಕೆ ಬಡಿದು ಹುಡಿ ಮಾಡಿದ ಘಟನೆ ಪುತ್ತೂರು ಕಸಬಾ ನಗರ ಠಾಣ ವ್ಯಾಪ್ತಿಯ ಬಪ್ಪಳಿಗೆ ಗುಂಪಕಲ್ಲು ಎಂಬಲ್ಲಿ ನಡೆದಿದೆ.

ಬಪ್ಪಳಿಗೆಯಲ್ಲಿರುವ ಗುಂಪಕಲ್ಲು ಅಂಬಿಕಾ ವಿದ್ಯಾಸಂಸ್ಥೆಯ ಸಮೀಪ ಪುತ್ತೂರಿನಿಂದ ಬಲ್ನಾಡು ತೆರಳುವ ರಸ್ತೆಯಲ್ಲಿ ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತಿತ್ತು. ಮೆಸ್ಕಾಂನಿಂದ ಈ ಕೆಲಸದ ಗುತ್ತಿಗೆ ಪಡೆದಿರುವ ಕಂಟ್ರಾಕ್ಟರ್ ದಾರನ ಕಾರ್ಮಿಕರು ಈ ಕೆಲಸ ಮಾಡುತಿದ್ದರು. ಆದರೇ ಅವರ್ಯಾರು ಮೆಸ್ಕಾಂನ ಮಾನದಂಡದ ಪ್ರಕಾರ ಅಗತ್ಯ ಸುರಕ್ಷತಾ ಸಾಧನಗಳನ್ನು ಬಳಸಿರಲಿಲ್ಲ. ಅಪಾಯವನ್ನು ಆಹ್ವಾನಿಸುವ ರೀತಿಯಲ್ಲಿ ವಿದ್ಯುತ್ ತಂತಿಯ ಪಕ್ಕ ಕೆಲಸದಲ್ಲಿ ನಿರತರಾಗಿದ್ದರು.
ಈ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಸಂಚರಿಸಿದ ವಿಜಯವಾಣಿ ಪತ್ರಕರ್ತ ಹಾಗೂ ದಿಗ್ವಿಜಯ ವಾಹಿನಿಯ ವರದಿಗಾರ ಈ ಕುರಿತು ಮೆಸ್ಕಾಂ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಹಿನ್ನಲೆ ವಿಡಿಯೋ ಚಿತ್ರೀಕರಿಸಿದ್ದಾರೆ. ಇದನ್ನು ನೋಡಿದ ದುಷ್ಕರ್ಮಿಗಳು ನಿಶಾಂತ್ ಬಿಲ್ಲಂಪದವು ಅವರ ಕೈಯಿಂದ ಮೊಬೈಲ್ ಕಸಿದು ಅದನ್ನು ಮಾರ್ಗಕ್ಕೆ ಎಸೆದು ಪುಡಿ ಮಾಡಿದ್ದಾರೆ. ಕೊಲ್ಲುವುದಾಗಿ ಜೀವ ಬೆದರಿಕೆ ಒಡ್ಡಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿಯ ಪುತ್ತೂರು ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ನಿಶಾಂತ್ ಬಿಲ್ಲಂಪದವು ಅವರ ಮೇಲೆ ಜುಲೈ 15ರಂದು ಪುತ್ತೂರಿನ ಬಪ್ಪಳಿಗೆಯಲ್ಲಿ ನಡೆದಿರುವ ದೌರ್ಜನ್ಯವನ್ನು ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು‌ ಘಟಕ ಖಂಡಿಸುತ್ತದೆ. ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರುವ ನಿಶಾಂತ್ ಬಿಲ್ಲಂಪದವು ಅವರು ಕಾರ್ಯ ನಿರತರಾಗಿದ್ದ ವೇಳೆ ಅಮಾನವೀಯವಾಗಿ ವರ್ತಿಸಿ ಅವರಿಗೆ ಹಲ್ಲೆ ನಡೆಸಿ ಮೊಬೈಲ್ ಫೋನ್‌ ಹುಡಿ ಮಾಡಿ ಜೀವ ಬೆದರಿಕೆ‌ ಒಡ್ಡಿರುವ ಘಟನೆಯನ್ನು‌ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು‌ ಜರುಗಿಸಬೇಕು ಎಂದು‌ ಒತ್ತಾಯಿಸುತ್ತದೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ‌ ಜರಗಿಸದೇ ಇದ್ದಲ್ಲಿ‌ ಎಲ್ಲಾ ಪತ್ರಕರ್ತರ ಸಂಘವನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು‌ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು‌ ಘಟಕದ ಅಧ್ಯಕ್ಷ ರಾಮದಾಸ್ ಶೆಟ್ಟಿ‌ ವಿಟ್ಲ, ಪ್ರಧಾನ ಕಾರ್ಯದರ್ಶಿ ಸಂತೋಷ್ ಮೊಟ್ಟೆತ್ತಡ್ಕ‌ ಮತ್ತು‌ ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ತಿಳಿಸಿದ್ದಾರೆ.

- Advertisement -

Related news

error: Content is protected !!