Saturday, April 27, 2024
spot_imgspot_img
spot_imgspot_img

ಮಂಗಳೂರು: ಸ್ನೇಹಿತನ ಸಾವಿಗೆ ನ್ಯಾಯ ಕೊಡಿಸಲು ಹೋರಾಟ.!! ಅಧಿಕಾರಿಗಳ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ

- Advertisement -G L Acharya panikkar
- Advertisement -

ಮಂಗಳೂರು: ಇತ್ತೀಚೆಗೆ ರಸ್ತೆಗುಂಡಿಗೆ ಬಲಿಯಾದ ತನ್ನ ಸ್ನೇಹಿತನ ಸಾವಿಗೆ ನ್ಯಾಯ ಕೊಡಿಸಲು ವಿಧ್ಯಾರ್ಥಿಗಳು ಮುಂದಾಗಿದ್ದು, ಮಂಗಳೂರಿನಲ್ಲಿರುವ ರಸ್ತೆಗುಂಡಿಗಳ ವಿರುದ್ದ ಇದೀಗ patholeseazaadi ಅಭಿಯಾನ ಆರಂಭವಾಗಿದೆ. ಇಂತಹ ಸಾವಿಗೆ ಯಾರು ಹೊಣೆ.!? ಇದು ಸರಕಾರ ಮಾಡಿರುವ ಕೊಲೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಆತಿಶ್ ಸ್ನೇಹಿತ ಲಖಿತ್ ರೈ ಒಬ್ಬಂಟಿಯಾಗಿ ಮಂಗಳೂರು ಮಹಾನಗರ ಪಾಲಿಕೆ ಎದುರು ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದು. ಈ ಸಾವಿಗೆ ನ್ಯಾಯ ಇಲ್ಲವೇ.! ನನಗೆ ಸ್ನೇಹಿತ.. ತಂದೆ ತಾಯಿ ಮಗ ದೂರವಾಗಿದ್ದಾನೆ ಇದಕ್ಕೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆತಿಶ್ ನಂತೂರು ಜಂಕ್ಷನ್‌ನಿಂದ ಬಿಕರ್ನಕಟ್ಟೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದು, ಮಳೆಯಿಂದಾಗಿ ಕಂಡೆಟ್ಟು ಕ್ರಾಸ್‌ಗೆ ಸ್ವಲ್ಪ ಮೊದಲು ಬಿದ್ದಿದ್ದ ಗುಂಡಿಯನ್ನು ಅವರು ಗಮನಿಸಲಿಲ್ಲ. ಕೊನೆ ಕ್ಷಣದಲ್ಲಿ ಗುಂಡಿ ತಪ್ಪಿಸಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿವೈಡರ್‌ನ ಕಬ್ಬಿಣದ ರಿಫ್ಲೆಕ್ಟರ್ ರೇಲಿಂಗ್‌ಗೆ ಅವರ ತಲೆ ಬಡಿದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ನಗರದ ಗುಂಡಿಗಳನ್ನು ತುಂಬಿಸದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕೊಲೆ ದೂರು ದಾಖಲಿಸುವಂತೆ ನೆಟ್ಟಿಗರು ಆಗ್ರಹಿಸಿದ್ದು, ಇನ್ನು ಕೆಲವರು ಜನಪ್ರತಿನಿಧಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಇಂಜಿನಿಯರಿಂಗ್ ನ ಅಂತಿಮ ವರ್ಷದ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ಸ್ನೇಹಿತನ ಕಳೆದಕೊಂಡ ವಿಧ್ಯಾರ್ಥಿಗಳು ಇದೀಗ ಅಧಿಕಾರಿಗಳ ವಿರುದ್ದ ಅಭಿಯಾನ ಆರಂಭಿಸಿದ್ದಾರೆ.

- Advertisement -

Related news

error: Content is protected !!