Tuesday, June 23, 2026
spot_imgspot_img
spot_imgspot_img

ಉಳ್ಳಾಲ: ಅಂಗವಿಕಲ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ – ಆರೋಪಿ ಸಿದ್ಧಿಕ್ ಬಂಧನ

- Advertisement -
- Advertisement -

ಉಳ್ಳಾಲ: ಅಂಗವಿಕಲ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಮಂಗಳೂರಿನ ಕೊಣಾಜೆ ಠಾಣಾ ವ್ಯಾಪ್ತಿಯ ಕೈರಂಗಳ ದಲ್ಲಿ ನಡೆದಿದೆ.

ಹೂಹಾಕುವಕಲ್ಲು ಕುಕ್ಕುದಕಟ್ಟೆ ನಿವಾಸಿ ಸಿದ್ಧಿಕ್ ಪ್ರತಿದಿನ ಬಾಲಕಿಯ ಮನೆಯ ಸಮೀಪದ ಮೈದಾನಕ್ಕೆ ಕ್ರಿಕೆಟ್ ಆಡಲು ಬರುತ್ತಿದ್ದನು. ಕ್ರಿಕೆಟ್ ವೀಕ್ಷಿಸುತ್ತಿದ್ದ ಅಸಹಾಯಕ ಬಾಲಕಿಯ ಮುಗ್ಧತೆಯನ್ನು ತಿಳಿದು ತಾಯಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಇದನ್ನು ವಿರೋಧಿಸಿದ ಬಾಲಕಿ ಗಾಬರಿಯಿಂದ ಹೊರಕ್ಕೆ ಒಡಿ ಪಕ್ಕದ ಮನೆಯವರಲ್ಲಿ ಮಾಹಿತಿ ನೀಡಿದ್ದಾಳೆ. ವಿಷಯ ತಿಳಿದ ತಾಯಿ ಬಾಲಕಿಯ ದೊಡ್ಡಪ್ಪನಿಗೆ ತಿಳಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಸಿದ್ಧಿಕ್ ಸಲೂನ್ ಗೆ ಓಡಿದ್ದು, ಪೊಲೀಸರು ಸಲೂನ್ ಗೆ ಬರುವಾಗ ತಪ್ಪಿಸಿಕೊಳ್ಳಲು ಯತ್ನಿಸಿದನಾದರೂ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

- Advertisement -

Related news

error: Content is protected !!