


ಬಂಟ್ವಾಳ : ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಬಂಟ್ವಾಳ ತಾಲೂಕು, ತೆಂಕಬೆಳ್ಳೂರು ಗ್ರಾಮದ ಧನುಪೂಜೆ ಮೂಡಾಯಿಕೋಡಿ ಕ್ರಾಸ್ ಎಂಬಲ್ಲಿ ನಡೆದಿದೆ.
ದಿನಾಂಕ: 27-01-2024 ರಂದು ಬೆಳಿಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರು ಹಾಗೂ ಠಾಣಾ ಸಿಬ್ಬಂದಿಗಳು ಬಂಟ್ವಾಳ ತಾಲೂಕು, ತೆಂಕಬೆಳ್ಳೂರು ಗ್ರಾಮದ ಧನುಪೂಜೆ ಮೂಡಾಯಿಕೋಡಿ ಕ್ರಾಸ್ ಎಂಬಲ್ಲಿ ಕೆಎ19 ಎಬಿ6530 ನೋಂದಾವಣೆಯ ಲಾರಿಯನ್ನು ತಡೆದು ಪರಿಶೀಲಿಸಿದಾಗ ಲಾರಿಯಲ್ಲಿ ಮರಳು ತುಂಬಿಸಿರುವುದು ಕಂಡುಬಂದಿದ್ದು, ಈ ಬಗ್ಗೆ ಆರೋಪಿ ಲಾರಿ ಚಾಲಕ ಮತ್ತು ಮಾಲಿಕರಾದ ರಾಝಿಕ್ ಎಂಬವರಲ್ಲಿ ವಿಚಾರಿಸಿದಾಗ, ಆರೋಪಿಯು ಯಾವುದೇ ಪರವಾನಿಗೆ ಇಲ್ಲದೆ ಸರಕಾರದ ಸೊತ್ತಾದ ಮರಳನ್ನು ಅಡ್ಡೂರು ಎಂಬಲ್ಲಿ ಹೊಳೆಯಿಂದ ಕಳವು ಮಾಡಿ ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದು, ಮುಂದಿನ ಕಾನೂನುಕ್ರಮಕ್ಕಾಗಿ ಲಾರಿಯನ್ನು ಹಾಗೂ ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ 12/2024 ಕಲಂ: 379 IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.








