Monday, May 6, 2024
spot_imgspot_img
spot_imgspot_img

ಬ್ರಹ್ಮಾವರ: ಅಪರಿಚಿತ ಮಹಿಳೆಯರಿಂದ ಮಗು ಅಪಹರಣಕ್ಕೆ ಯತ್ನ

- Advertisement -G L Acharya panikkar
- Advertisement -

ಬ್ರಹ್ಮಾವರ:‌ ಮನೆಗೆ ಬಂದ ಇಬ್ಬರು ಅಪರಿಚಿತರು ಮಹಿಳೆಯರು ಮನೆಯಲ್ಲಿದ್ದ 1 ವರ್ಷದ ಮಗುವನ್ನು ಅಪಹರಿಸಲು ಯತ್ನಿಸಿರುವ ಘಟನೆ ಬ್ರಹ್ಮಾವರದ ಉಪ್ಪಿನಕೋಟೆಯಲ್ಲಿ ನಡೆದಿದೆ.

ಫೆ. 21ರಂದು ಬೆಳಿಗ್ಗೆ ಉಪ್ಪಿನಕೋಟೆಯ ಮಹಿಮಾ ಎಂಬವರ ಮನೆಗೆ ಬಂದ ಇಬ್ಬರು ಅಪರಿಚಿತ ಹೆಂಗಸರು ತಾವು ಬಾಂಬೆಯಿಂದ ಬಂದಿರುವುದಾಗಿ ತಿಳಿಸಿದ್ದಾರೆ. ಇನ್ನು ಮನೆಯವರ ವಿರೋಧದ ನಡುವೆಯೂ ಸೀದಾ ಮನೆಯೊಳಗೆ ಬಂದು ಮಹೀಮಾ ಅವರ 1 ವರ್ಷದ ಹೆಣ್ಣು ಮಗುವನ್ನು ಎತ್ತಿಕೊಂಡು ಮೊಬೈಲಿನಲ್ಲಿರುವ ವಿಡಿಯೋಗಳನ್ನು ತೋರಿಸುತ್ತಾ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಕೂಡಲೇ ಮಹಿಮಾ ಅವರು ಅಪರಿಚಿತ ಹೆಂಗಸು ಎತ್ತಿಕೊಂಡು ಹೋದ ಮಗುವನ್ನು ಕರೆದುಕೊಂಡು ಬಂದಿರುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಮಹಿಮಾ ಅವರ ಅಣ್ಣ ಬಂದಿದ್ದನ್ನು ನೋಡಿದ ಆರೋಪಿಗಳು ಅಲ್ಲಿಂದ ಓಡಿ ಹೋಗಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!