




ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ (ನಿ) ವಿಟ್ಲ ಶಾಖೆಯ ಸ್ವಂತ ಕಟ್ಟಡ ಸ್ಥಳಾಂತರಗೊಂಡು ವಿಟ್ಲ ಪುತ್ತೂರು ಮುಖ್ಯ ರಸ್ತೆಯ ಸ್ಮಾರ್ಟ್ ಸಿಟಿ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯಲ್ಲಿ ಕಾರ್ಯನಿರ್ವಹಿಸಲು ಮುಂದಾಗಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಪರಮಪೂಜ್ಯ ಶ್ರೀ ಗುರುದೇವದತ್ತ ಸ್ವಾಮೀಜಿ ಒಡಿಯೂರು ಗುರುದೇವದತ್ತ ಸಂಸ್ಥಾನಮ್, ಸಂಸ್ಥಾಪಕರು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ಇವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಆಶೀರ್ವಚನ ಗೈದರು.
ಸಾಧ್ವೀ ಶ್ರೀ ಮಾತಾನಂದಮಯೀ ಗೌರವ ಮಾರ್ಗದರ್ಶಕರು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ಇವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಿಂಗಪ್ಪ ಗೌಡ ಪೆನೆಯಡ್ಕ ವಹಿಸಿ ಸ್ಥಳಾಂತರಗೊಂಡ ನೂತನ ಕಛೇರಿಗೆ ಶುಭ ಹಾರೈಸಿದರು.




ಕಾರ್ಯಕ್ರಮದಲ್ಲಿ ಬಂಗಾರು ಅರಸರು ವಿಟ್ಲ ಅರಮನೆ, ಅನುವಂಶಿಕ ಮೊಕ್ತೇಸರರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ, ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಶಾಸಕರು ಬಂಟ್ವಾಳ ವಿಧಾನಸಭಾ ಕ್ಷೇತ್ರ, ಶಕುಂತಳಾ ಟಿ. ಶೆಟ್ಟಿ ಮಾಜಿ ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ, ಶಶಿಕುಮಾರ್ ರ್‌ಐ ಬಾಳ್ಯೊಟ್ಟು ನಿರ್ದೇಶಕರು ಎಸ್‌ಸಿಡಿಸಿಸಿ ಬ್ಯಾಂಕ್, ಭಾರತಿ ಜಿ ಭಟ್, ನಿರ್ದೇಶಕರು ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಫೆಡರೇಶನ್ ಬೆಂಗಳೂರು, ಡಾ.ವಿ ಕೆ ಹೆಗ್ಡೆ ಪುಪ್ಷಕ್ ಹೆಲ್ತ್ ಸೆಂಟರ್ ವಿಟ್ಲ, ಜಯರಾಮ್ ರೈ ವಕೀಲರು ಬಿ ಸಿ ರೋಡ್, ಅಲೆಕ್ಸಾಂಡರ್ ಲಸ್ರಾದೊ ಉದ್ಯಮಿಗಳು ವಿಟ್ಲ, ರಾಧಕೃಷ್ಣ ನಾಯಕ್ ಉದ್ಯಮಿಗಳು ವಿಟ್ಲ, ವಿಜಯ ಕುಮಾರ್ ಬಿ ಎಸ್ ಜಿಲ್ಲಾ ಸಂಯೋಜಕರು ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಫೆಡರೇಶನ್ ಇವರುಗಳು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ನೂತನ ಕಛೇರಿಗೆ ಶುಭಹಾರೈಸಿದರು.
ಕುಮಾರಿ ಶ್ರದ್ಧಾ ಪ್ರಾರ್ಥಿಸಿ, ದಯಾನಂದ ಶೆಟ್ಟಿ ಬಾಕ್ರಬೈಲು ಮುಖ್ಯಕಾರ್ಯನಿರ್ವಹಣಾಧಿಕಾರಿ ಸ್ವಾಗತಿಸಿದರು. ಎಂ ಉಗ್ಗಪ್ಪ ಶೆಟ್ಟಿ ನಿರ್ದೇಶಕರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣಪತಿ ಭಟ್ ಸೇರಾಜೆ ನಿರ್ದೇಶಕರು ವಂದಿಸಿ, ಲೋಕೇಶ್ ರೈ ಕರ್ಫಿಕಾರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ (ನಿ) ಇದರ ನಿರ್ದೇಶಕರು, ಸದಸ್ಯರು, ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ (ನಿ) ಇಲ್ಲಿ ಠೇವಣಿಗಳ ಮೇಲೆ ಆಕರ್ಷಕ ಬಡ್ಡಿ ದರಗಳ ಮೇಗೆ ದಸರಾ, ದೀಪಾವಳಿಯ ಪ್ರಯುಕ್ತ ಗ್ರಾಹಕರಿಗೆ ಪ್ರಸ್ತುತ ಪಡಿಸಲಿದೆ ವಿಶೇಷ ಕೊಡುಗೆ.
ಒಂದು ವರ್ಷದ ಅವಧಿಗೆ ವಿಶೇಷ ನಿಖರ ಠೇವಣಿ ಬಡ್ಡಿದರ 9.50%. ಹಿರಿಯರಿಗೆ 10%. ಈ ವಿಶೇಷ ಕೊಡುಗೆ 30/12/2023ರ ವರೆಗೆ ಮಾತ್ರ
ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಹಾಗೂ ಸಾಧ್ವಿ ಶ್ರೀ ಮಾತಾನಂದಮಯೀಯವರ ಆಶೀರ್ವಾದದೊಂದಿಗೆ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ (ನಿ) 20/04/2011 ರಂದು ಪ್ರಾರಂಭಗೊಂಡಿದ್ದು, ಕಳೆದ 12 ವರ್ಷಗಳಿಂದ ಯಶಸ್ವೀ ಸಾಧನೆಯೊಂದಿಗೆ ಬೆಳೆಯುತ್ತಾ ಬಂದಿದೆ. 2022-2023 ನೇ ಸಾಲಿನಲ್ಲಿ ಸಮರ್ಥ 17 ಆಡಳಿತ ಮಂಡಳಿ ನಿರ್ದೇಶಕರನ್ನೊಳಗೊಂಡು ಸಹಕಾರಿಯ 19 ಶಾಖೆಗಳ ಮೂಲಕ 32830 ಮಂದಿ ಸದಸ್ಯರಿಂದ ರೂ. 1.73 ಕೋಟಿ ಹೊರಬಾಕಿ ಸಾಲಗಳೊಂದಿಗೆ ದುಡಿಯುವ ಬಂಡವಾಳ ರೂ. 26188 ಕೋಟಿಗಳೊಂದಿಗೆ ಒಟ್ಟು ರೂ. 432.75 ಕೋಟಿ ವ್ಯವಹಾರ ನಡೆಸಿ ರೂ. 3.22 ಕೋಟಿ ಲಾಭ ಗಳಿಸಿರುತ್ತದೆ. 69 ನೇ ಅಖಿಲ ಭಾರತ ಸಹಕಾರಿ ಸಪ್ತಾಹ 2022 ರಲ್ಲಿ ಉತ್ತಮ ಸೌಹಾರ್ದ ಸಹಕಾರಿ ಸಂಘ ಪ್ರಶಸ್ತಿಯನ್ನು ಪಡೆದಿರುತ್ತದೆ.