Monday, June 22, 2026
spot_imgspot_img
spot_imgspot_img

ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ

- Advertisement -
- Advertisement -

ನವದೆಹಲಿ: ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಸಿಕ್ಕಿದೆ. ಭಾರತದ ಮಹಿಳಾ ಶೂಟರ್ ಅವನಿ ಲೇಖರ ಅವರು 10 ಮೀಟರ್​ನ ಏರ್​ ರೈಫಲ್ ಶೂಟಿಂಗ್​ನಲ್ಲಿ ಚಿನ್ನ ಗೆದ್ದಿದ್ದಾರೆ. ಇಂದು ಬೆಳಗ್ಗೆ ರೌಂಡ್ 2 ನಲ್ಲಿ ಅವನಿ ಲೇಖರ ಫೈನಲ್​ಗೆ ಆಯ್ಕೆಯಾಗಿದ್ದರು.

ಅವನಿ ಲೇಖರ ಭಾರತಕ್ಕೆ ಚಿನ್ನದ ಪದಕ ತಂದುಕೊಡುವುದಷ್ಟೇ ಅಲ್ಲದೇ ವಿಶ್ವದಾಖಲೆಯನ್ನೂ ಸರಿಗಟ್ಟಿದ್ದಾರೆ. ಇನ್ನು ಅವನಿ ಲೇಖರ ರವರು ಚಿನ್ನದ ಪದಕ ಗೆಲ್ಲುತ್ತಲೇ ಪ್ಯಾರಾಲಿಂಪಿಕ್ ಕಮಿಟಿಯ ಪ್ರೆಸಿಡೆಂಟ್ ದೀಪಾ ಮಲಿಕ್ ಶುಭಾಶಯ ಕೋರಿದ್ದಾರೆ. ತಾಳ್ಮೆಯಿಂದ ಆಟವಾಡಿದ ಯುವ ಕ್ರೀಡಾಪಟು ಅವನಿ ಲೇಖರ ವಿಶ್ವ ದಾಖಲೆ ಸರಿಗಟ್ಟಿದ್ದಾರೆ ಎಂದಿದ್ದಾರೆ.

driving
- Advertisement -

Related news

error: Content is protected !!