Saturday, June 6, 2026
spot_imgspot_img
spot_imgspot_img

ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ದ.ಕ. ಜಿಲ್ಲಾ. ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರಶಸ್ತಿ

- Advertisement -
- Advertisement -

ವಿಟ್ಲ: ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ), ವಿಟ್ಲ ಇದರ 2023-24 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮಾಡಿದ ವಿಶಿಷ್ಟ ಸಾಧನೆಗಾಗಿ ದ.ಕ. ಜಿಲ್ಲಾ. ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ದಿನಾಂಕ 14/08/2024 ರಂದು ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷರಾದ ಯಂ ಯನ್ ರಾಜೇಂದ್ರ ಕುಮಾರ್, ಸಹಕಾರಿ ಸಂಘಗಳ ಉಪನಿಬಂಧಕರಾದ ರಮೇಶ್ ಹೆಚ್ ಎನ್ ಹಾಗೂ ನಿರ್ದೇಶಕರುಗಳು ಈ ಪ್ರಶಸ್ತಿಯನ್ನು ಮಹಾಸಭೆಯಲ್ಲಿ ಪ್ರದಾನ ಮಾಡಿದರು.

ಸಂಘದ ಅಧ್ಯಕ್ಷರಾದ ನರ್ಸಪ್ಪ ಪೂಜಾರಿ ಯನ್, ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಭುವನೇಶ್ವರ ಬಿ ಇವರುಗಳು ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಮಹಾಬಲೇಶ್ವರ ಭಟ್ ಎ, ನಿರ್ದೇಶಕರುಗಳಾದ ಉದಯಕುಮಾರ್ ಯನ್, ಸದಾನಂದ ಗೌಡ ಸೇರಾಜೆ, ಗೌರಿ ಯಸ್, ಯನ್, ಭಟ್, ಶಿವಪ್ಪ ನಾಯ್ಕ ಉಪಸ್ಥಿತರಿದ್ದರು.

ಸಂಘವು ವರದಿ ಸಾಲಿನಲ್ಲಿ ಪಾಲು ಬಂಡವಾಳ 3.70 ಲಕ್ಷ, ಸಾಲ ಹೊರಬಾಕಿ 33. ಕೋಟಿ, ಹಾಗು 32 ಕೋಟಿ ಠೇವಣಾತಿ ಹೊಂದಿದೆ. ಸಾಲ ವಸೂಲಾತಿ ಶೇಕಡಾ 96.50 ಇದೆ. 2023-24 ನೇ ಸಾಲಿನಲ್ಲಿ 205 ಕೋಟಿ ವ್ಯವಹಾರ ನಡೆಸಿ 1.07 ಕೋಟಿ ಲಾಭ ಗಳಿಸಿ ಎ ತರಗತಿ ಸ್ಥಾನವನ್ನು ಪಡೆದಿದೆ. ಈ ವರೆಗೆ ಸಂಘವು 8 ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

- Advertisement -

Related news

error: Content is protected !!