Friday, April 19, 2024
spot_imgspot_img
spot_imgspot_img

ಅಯೋಧ್ಯೆ ಮತ್ತು ಲಖನೌ ನಡುವೆ ರಾಮಾಯಣ ವಸ್ತು ಸಂಗ್ರಹಾಲಯ ಮತ್ತು ಸಾಂಸ್ಕೃತಿಕ ಕೇಂದ್ರ ಸ್ಥಾಪನೆಗೆ ಮುಂದಾದ ಯೋಗಿ ಆದಿತ್ಯನಾಥ್

- Advertisement -G L Acharya panikkar
- Advertisement -

ಲಖನೌ: ಅಯೋಧ್ಯೆ ಮತ್ತು ಲಖನೌ ನಡುವಿನ ರಾಮಸ್ನೇಹಿ ಘಾಟ್‌ನಲ್ಲಿ 10 ಎಕರೆ ಪ್ರದೇಶದಲ್ಲಿ ಅಂತರಾಷ್ಟ್ರೀಯ ಮಟ್ಟದ ‘ರಾಮಾಯಣ ವಸ್ತು ಸಂಗ್ರಹಾಲಯ ಮತ್ತು ಸಾಂಸ್ಕೃತಿಕ ಕೇಂದ್ರ’ ಸ್ಥಾಪನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂದಾಗಿದ್ದಾರೆ.

ಈ ಮ್ಯೂಸಿಯಂನಲ್ಲಿ ಇಡೀ ರಾಮನ ಜೀವನದ ಘಟ್ಟಗಳನ್ನು ನೋಡಬಹುದು, ಅಲ್ಲದೆ ರಾಮನ ಭವ್ಯ ಮತ್ತು ದೈವಿಕ ದರ್ಶನವನ್ನು ಪಡೆಯಲು ಸಾದ್ಯವಾಗುತ್ತದೆ. ಅಲ್ಲದೆ ಈ ವಸ್ತು ಸಂಗ್ರಾಲಯದಲ್ಲಿ ರಷ್ಯಾ, ಜಪಾನ್, ಇಂಡೋನೇಷ್ಯಾ , ಮಲೇಷ್ಯಾ ಮತ್ತು ಭಾರತದ ಕೈಗೊಂಬೆಗಳ ಮೂಲಕ ರಾಮಾಯಣದ ಪ್ರದರ್ಶಗಳು ಇರಲಿವೆ.

ಹಾಗೇ ಮಧುಬನಿ, ಅವಧ್, ಛತ್ತೀಸ್​ಗಡ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಶ್ರೀಲಂಕಾದ ಭಕ್ಷ್ಯಗಳನ್ನು ಹೊಂದಿರುವ ಅಡುಗೆಮನೆ ಸಹ ಇಲ್ಲಿ ಕಾರ್ಯನಿರ್ವಹಿಸಲಿದೆ ಅಂತ ಉತ್ತರಪ್ರದೇಶ ಸರ್ಕಾರದ ವಕ್ತಾರರು ಹೇಳಿದ್ದಾರೆ.

- Advertisement -

Related news

error: Content is protected !!