- Advertisement -
- Advertisement -


ಅಯೋಧ್ಯೆಯನ್ನು ಶ್ರೀರಾಮನ ಜನ್ಮಸ್ಥಳವೆಂದು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. 2024ರಲ್ಲಷ್ಟೇ ಅಯೋಧ್ಯೆಯಲ್ಲಿ ರಾಮ ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಂಡು ಲಕ್ಷಾಂತರ ಜನರು ರಾಮನ ದರ್ಶನ ಪಡೆದುಕೊಂಡಿದ್ದಾರೆ. ಇದೀಗ ಅಯೋಧ್ಯೆಯ ಬಾಲ ರಾಮನ ಪ್ರತಿಷ್ಠಾಪನೆಯಾಗಿ ವರ್ಷ ತುಂಬಿದೆ.
ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವದ ಸಂಭ್ರಮ ಇಂದಿನಿಂದ ಮೂರು ದಿನಗಳ ಕಾಲ ಜರುಗಲಿದೆ.ಶುಭ ಯೋಗಗಳು ಹಾಗೂ ದ್ವಾದಶಿ ತಿಥಿಯು 2025ರಲ್ಲಿ ಜನವರಿ 11 ರಂದು ಬಂದಿರುವುದರಿಂದ ಅಯೋಧ್ಯೆ ರಾಮ ಮಂದಿರದ ವಾರ್ಷಿಕ ಪ್ರಾಣ ಪ್ರತಿಷ್ಠಾಪನೆಯನ್ನು ಜನವರಿ 22ರ ಬದಲಾಗಿ ಜನವರಿ 11ರಂದು ಆಚರಿಸಲಾಗುತ್ತಿದೆ. ಈಗಾಗಲೇ ಅಯೋಧ್ಯೆಯ ರಾಮ ಮಂದಿರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಒಂದೊಂದೇ ಕಾರ್ಯಕ್ರಮಗಳು ನೆರವೇರುತ್ತಿವೆ.
- Advertisement -