Sunday, June 14, 2026
spot_imgspot_img
spot_imgspot_img

ಕಂಬಳಬೆಟ್ಟು-ಧರ್ಮನಗರ ಜಯದುರ್ಗ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ-ಆಯುಧ ಪೂಜೆ:

- Advertisement -
- Advertisement -

ದಿನಾಂಕ 23 /10/2020ರಂದು ಶುಕ್ರವಾರ ದಂದು ಕಂಬಳಬೆಟ್ಟು-ಧರ್ಮನಗರ ಜಯದುರ್ಗ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ ಸಲುವಾಗಿ ಆಯುಧ ಪೂಜೆ ಹಾಗೂ ದೇವಿಗೆ ವಿಶೇಷ ಸೇವೆಗಳು ವಿಜೃಂಭಣೆಯಿಂದ ಜರುಗಿದವು.

ಇಲ್ಲಿನ ವಿಶಿಷ್ಟವೆಂದರೆ ನವರಾತ್ರಿ ಸಮಯದಲ್ಲಿ ಮಾತ್ರವಲ್ಲದೇ ಪ್ರತಿ ಶುಕ್ರವಾರವು ಇಲ್ಲಿ ಭಜನೆಯ ಜೊತೆಗೆ ತಾಯಿ ಜಯದುರ್ಗೆಯನ್ನು ಸ್ತುತಿಸುವ ಭಜನಾ ತಂಡವೇ ಇದೆ.ಹಲವಾರು ವರ್ಷಗಳಿಂದ ಬಹಳ ವಿಶಿಷ್ಟ ರೀತಿಯಲ್ಲಿ ಸುದ್ದಿಯಲ್ಲಿರುವ ಸ್ಥಳವಿದು. ಏಕೆಂದರೆ ಇಲ್ಲಿ ನಡೆಯುವ ಗಣೇಶೋತ್ಸವ ಇಡೀ ಜಿಲ್ಲೆಗೆ ಮಾದರಿಯಾಗಿದೆ.

ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರೇರಣೆಯಿಂದ ಈ ಪರಿಸರದಲ್ಲಿ ಸುಮಾರು ನಲುವತ್ತೊಂಭತ್ತು ವರ್ಷಗಳಿಂದ ಗಣೇಶೋತ್ಸವವನ್ನು ಅದ್ಧೂರಿಯಿಂದ ಆಚರಿಸಲಾಗುತ್ತದೆ. ಮುಂದಿನ ವರ್ಷ ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ಈಗಾಗಲೇ ಕಾರ್ಯಕರ್ತರು 50ನೇ ವರ್ಷದ ಗಣೇಶೋತ್ಸವಕ್ಕೆ ಭರದಿಂದ ತಯಾರಿ ನಡೆಸುತ್ತಿರುವುದು ಇಲ್ಲಿನ ಕಾರ್ಯಕರ್ತರ ಒಗ್ಗಟ್ಟನ್ನು ತೋರಿಸುತ್ತದೆ.

ಕೊರೋನಾ ಛಾಯೆಯ ನಡುವೆಯೂ ನೂರಾರು ಭಕ್ತಾದಿಗಳು ಜಯದುರ್ಗೆಯ ಸನ್ನಿಧಿಯಲ್ಲಿ ನಡೆದ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

- Advertisement -

Related news

error: Content is protected !!