Tuesday, April 30, 2024
spot_imgspot_img
spot_imgspot_img

ಪುಟ್ಟ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಗಿಡಮೂಲಿಕೆಗಳು

- Advertisement -G L Acharya panikkar
- Advertisement -

ಮಕ್ಕಳ ಸೂಕ್ಷ್ಮ ದೈಹಿಕ ಆರೋಗ್ಯಕ್ಕೆ ಚೆನ್ನಾಗಿ ಕೆಲಸ ಮಾಡುವಂತಹ ಗಿಡಮೂಲಿಕೆಗಳು ಇಲ್ಲಿವೆ. ಒಮ್ಮೆ ವೈದ್ಯರನ್ನು ಕೇಳಿ ಅವರ ಸಲಹೆ ಮೇರೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ನಿಮ್ಮ ಮಕ್ಕಳಿಗೆ ಇವುಗಳನ್ನು ಕೊಡಬಹುದು.

ಆರೋಗ್ಯಕರ ಜೀವನಕ್ಕೆ ಬೇಕಾದ ಆಹಾರಗಳು ನಮ್ಮ ಸುತ್ತಮುತ್ತಲೇ ಸಿಗುತ್ತವೆ. ಆದರೆ ಯಾವ ಆಹಾರಗಳು ಯಾವ ವಯಸ್ಸಿನವರಿಗೆ ಸೂಕ್ತ ಮತ್ತು ಎಷ್ಟು ಪ್ರಮಾಣ ದಲ್ಲಿ ಕೊಡಬಹುದು ಎಂಬುದನ್ನು ತಿಳಿದುಕೊಳ್ಳಬೇಕು ಅಷ್ಟೇ. ಇಲ್ಲಿ ಮಕ್ಕಳ ವಿಚಾರ ಮಾತನಾಡುತ್ತಿದ್ದೇವೆ. ಪುಟ್ಟ ಮಕ್ಕಳ ಆರೋಗ್ಯ ಬಹಳ ಸೂಕ್ಷ್ಮ.

ಹಾಗಾಗಿ ದೊಡ್ಡವರಿಗಿಂತ ಬೇಗನೆ ಅವರಿಗೆ ರೋಗ ರುಜಿನಗಳು ತಾಗುತ್ತವೆ. ಏಕೆಂದರೆ ನಮಗೆ ಹೋಲಿಸಿದರೆ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೋಷಕರು ಹಲವಾರು ಪ್ರಯತ್ನಗಳನ್ನು ಮಾಡಬಹುದು. ಅದರಲ್ಲಿ ಆಯುರ್ವೇದ ಗಿಡಮೂಲಿಕೆಗಳನ್ನು ಕೊಡುವುದು ಕೂಡ ಒಂದು. ಮಿತ ಪ್ರಮಾಣದಲ್ಲಿ ನಿಯಮಿತವಾಗಿ ಇವುಗಳನ್ನು ಕೊಡುವುದರಿಂದ ಮಕ್ಕಳ ಆರೋಗ್ಯ ಚೆನ್ನಾಗಿರುತ್ತದೆ. ಅದರಲ್ಲೂ ಈಗಿನ ಚಳಿಗಾಲದಲ್ಲಿ ಮಕ್ಕಳು ಅನೇಕ ಬಗೆಯ ಜ್ವರದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಈ ಗಿಡಮೂಲಿಕೆಗಳು ಸಹಾಯಕ್ಕೆ ಬರುತ್ತವೆ.

ಜನರ ಮನಸ್ಸಿನಲ್ಲಿ ಪೂಜನೀಯ ಸ್ಥಾನವನ್ನು ಪಡೆದಿರುವ ತುಳಸಿ ತನ್ನಲ್ಲಿ ಔಷಧೀಯ ಗುಣಗಳನ್ನು ಸಹ ಹೊಂದಿದೆ. ಭಾರತದಲ್ಲಿ ತುಳಸಿ ಗಿಡಕ್ಕೆ ಬಹಳಷ್ಟು ಪ್ರಾಧಾನ್ಯತೆ ಇದೆ. ಇದರಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಎಸೆನ್ಶಿಯಲ್ ಆಯಿಲ್, ವಿಟಮಿನ್ ಎ, ವಿಟಮಿನ್ ಸಿ ಅಡಗಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಬ್ಯಾಕ್ಟೀರಿಯಾ ಸೋಂಕುಗಳ ವಿರುದ್ಧ ಹೋರಾಡುವ ಆಂಟಿ ಬ್ಯಾಕ್ಟೀರಿಯಲ್ ಲಕ್ಷಣ ಕೂಡ ಇದರಲ್ಲಿ ಸಾಕಷ್ಟು ಇದೆ. ಹಾಗಾಗಿ ನಿಮ್ಮ ಮಕ್ಕಳು ತುಳಸಿಯಿಂದ ರೋಗ ನಿರೋಧಕ ಶಕ್ತಿಯನ್ನು ಪಡೆಯಬಹುದು.

ಇದನ್ನು ಒಂದೆಲಗ ಎಂದು ಸಹ ಕರೆಯುತ್ತಾರೆ. ಇದರಲ್ಲಿ ಕೂಡ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಮಕ್ಕಳ ಮಾನಸಿಕ ಆರೋಗ್ಯಕ್ಕೆ ಇದು ಹೇಳಿ ಮಾಡಿಸಿದ ಒಂದು ಗಿಡಮೂಲಿಕೆ ಎನ್ನಬಹುದು.
ಮಕ್ಕಳ ದೇಹಕ್ಕೆ ಅನುಕೂಲಕರವಾದ ಅನೇಕ ಪೌಷ್ಟಿಕ ಸತ್ವಗಳು ಇದರಲ್ಲಿ ಸಾಕಷ್ಟಿವೆ. ನೀವು ಒಂದು ವೇಳೆ ಇಷ್ಟರಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸುತ್ತೀರಿ ಎಂದಾದರೆ ಪ್ರತಿದಿನ ಒಂದು ಬ್ರಾಹ್ಮಿ ಎಲೆ ಯನ್ನು ಅವರಿಗೆ ತಿನ್ನಲು ಕೊಡಿ. ರೋಗ ನಿರೋಧಕ ಶಕ್ತಿಯ ಜೊತೆಗೆ ಬುದ್ಧಿಶಕ್ತಿ ಕೂಡ ಇದು ಹೆಚ್ಚಿಸುತ್ತದೆ.​

ಅಶ್ವಗಂಧ ಒಂದು ಆಯುರ್ವೇದ ಗಿಡಮೂಲಿಕೆ ಆಗಿದ್ದು, ತನ್ನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಪಡೆದಿರು ವುದು ನಮಗೆಲ್ಲರಿಗೂ ಗೊತ್ತೇ ಇದೆ.
ಕೇವಲ ದೊಡ್ಡವರಿಗೆ ಮಾತ್ರವಲ್ಲ ಮಕ್ಕಳಿಗೂ ಕೂಡ ಇದರಿಂದ ಸಾಕಷ್ಟು ಉಪಯೋಗವಿದೆ. ತಾಯಂದಿರು ಹಾಲಿನಲ್ಲಿ ಇದನ್ನು ಬೆರೆಸಿ ಮಕ್ಕಳಿಗೆ ಕುಡಿಯಲು ಕೊಡಬಹುದು. ಇದರಿಂದ ಮಕ್ಕಳು ಚಳಿಗಾಲದ ವಾತಾವ ರಣದಲ್ಲಿ ಬರುವಂತಹ ಅನೇಕ ಆರೋಗ್ಯ ಸಮಸ್ಯೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅನುಕೂಲವಾ ಗುತ್ತದೆ.

ಮಕ್ಕಳಿಗೆ ನಿಯಮಿತವಾಗಿ ಜಾಯಿಕಾಯಿ ಕೂಡ ಆಗಾಗ ಕೊಡುವು ದರಿಂದ ಅನುಕೂಲವಿದೆ. ಮಕ್ಕಳಿಗೆ ಸಾಮಾನ್ಯವಾಗಿ ನೆಗಡಿ, ಕೆಮ್ಮು, ಕಫ, ಶೀತ ಆಗುತ್ತಿರುತ್ತದೆ.
ಹಾಗಾಗಿ ಜಾಯಿಕಾಯಿ ಇದರಲ್ಲಿ ಪರಿಣಾಮಕಾರಿ ಸಾಮರ್ಥ್ಯ ವನ್ನು ಹೊಂದಿರುವ ಅದ್ಭುತ ಆಯುರ್ವೇದ ಗಿಡಮೂಲಿಕೆ ಯಾಗಿದೆ. ಪ್ರತಿದಿನ ಹಾಲಿನಲ್ಲಿ ಜಾಯಿಕಾಯಿ ಪೌಡರ್ ಮಿಕ್ಸ್ ಮಾಡಿ ಮಕ್ಕಳಿಗೆ ಕುಡಿಯಲು ಕೊಡುವುದರಿಂದ ಅವರ ರೋಗ ನಿರೋಧಕ ಶಕ್ತಿ ತಾನಾಗಿಯೇ ಹೆಚ್ಚಾಗುತ್ತದೆ.​

ಇದನ್ನು ಸಂಸ್ಕೃತದಲ್ಲಿ ಯಸ್ಟಿಮಧು ಅಂತ ಕರೆಯುತ್ತಾರೆ. ಇದು ಸಹ ಮಕ್ಕಳ ಆರೋಗ್ಯಕ್ಕೆ ಅದ್ಭುತವಾಗಿ ಕೆಲಸ ಮಾಡುವ ಒಂದು ಗಿಡಮೂಲಿಕೆಯಾಗಿದೆ.
ಇದರಲ್ಲಿ ಮುಖ್ಯವಾಗಿ ಆಂಟಿ ವೈರಲ್ ಲಕ್ಷಣಗಳು ಸಾಕಷ್ಟಿದ್ದು, ದೇಹದಲ್ಲಿ ಕಾಯಿಲೆ ತರುವ ರೋಗಗಳು ವಿರುದ್ಧ ಪರಿಣಾಮಕಾರಿ ಯಾಗಿ ಹೋರಾಡುವ ಶಕ್ತಿ ಹೊಂದಿದೆ. ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೀರಿನಲ್ಲಿ ಇದನ್ನು ಒಂದು ಚಿಟಿಕೆ ಹಾಕಿ ಕಷಾಯ ತಯಾರಿಸಿ ಕುಡಿಸಿ.

- Advertisement -

Related news

error: Content is protected !!