- Advertisement -
- Advertisement -
ಶಿವಮೊಗ್ಗ:-ಕಿಡಿಗೇಡಿಗಳು ನಗರದಲ್ಲಿ ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಕುವೆಂಪು ನಗರದಲ್ಲಿ 17 ಬ್ಯಾಟರಿಗಳ ಕಳ್ಳತನ, ಸೀಗೆಹಟ್ಟಿಯಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿದ ಬೆನ್ನಲ್ಲೇ ಗಾಂಧಿಬಜಾರ್ ನಲ್ಲಿ ನಿಲ್ಲಿಸಲಾಗಿದ್ದ ವಾಹನಗಳು ಕಿಡುಗೇಡಿಗಳ ಅಟ್ಟಹಾಸದಿಂದಾಗಿ ಬೂದಿಯಾಗಿ ಹೋಗಿವೆ.
ಗಾಂಧಿ ಬಜಾರ್ ನಲ್ಲಿ ಜ್ಯುವೆಲ್ಲರಿ ಅಂಗಡಿ ಮುಂದೆ ನಿಲ್ಲಿಸಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಬೆಂಕಿಯನ್ನ ನಂದಿಸಲು ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿತ್ತು.
ಮಧ್ಯರಾತ್ರಿ ಸಮಯದಲ್ಲಿ ಬೆಂಕಿ ಹಚ್ಚಲಾಗಿದ್ದು, ಮೆಪೆಡ್ ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
- Advertisement -