Sunday, May 5, 2024
spot_imgspot_img
spot_imgspot_img

ಚಳಿಗಾಲದ ನೆಗಡಿ, ಕೆಮ್ಮಿಗೆ ತಕ್ಷಣ ಪರಿಹಾರ ಒದಗಿಸುವ ಆಯುರ್ವೇದ ಚಹಾಗಳು!

- Advertisement -G L Acharya panikkar
- Advertisement -

ಚಳಿಗಾಲದ ಸಂದರ್ಭದಲ್ಲಿ ಕಂಡುಬರುವ ನೆಗಡಿ ಕೆಮ್ಮು ಇವುಗಳಿಗೆ ಆಯುರ್ವೇದ ಚಹಾ ರಾಮಬಾಣ. ತುಳಸಿ, ಶುಂಠಿ, ದಾಲ್ಚಿನ್ನಿ, ಕಾಳು ಮೆಣಸು ಇವುಗಳ ಉಪಯೋಗ ಪಡೆದುಕೊಳ್ಳಿ.

ಚಳಿಗಾಲದಲ್ಲಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಹಾಗೆಂದು ಅವುಗಳನ್ನು ನಿರ್ಲಕ್ಷ್ಯ ಮಾಡಲಾಗುವುದಿಲ್ಲ. ಹಾಗೆ ಬಿಟ್ಟರೆ ಅವೇ ದೊಡ್ಡದಾಗಿ ಹಾಸಿಗೆ ಹಿಡಿಯುವಂತೆ ಮಾಡುತ್ತವೆ. ಅದರಲ್ಲೂ ಈಗ ಕೊರೋನಾ ಮತ್ತೆ ತನ್ನ ಅಟ್ಟಹಾಸ ಶುರು ಮಾಡಿದೆ.

ಇಂತಹ ಸಂದರ್ಭದಲ್ಲಿ ಮನೆಯಿಂದ ಹೊರಗೆ ಹೋಗುವಾಗ ನಮ್ಮ ಸುರಕ್ಷತೆಯನ್ನು ನಾವು ಕಾಯ್ದುಕೊಳ್ಳುವುದು ಒಳ್ಳೆಯದು. ಹಾಗಾಗಿ ಮನೆಯಲ್ಲಿ ನಿಮಗೆ ಅಥವಾ ಮನೆಯ ಸದಸ್ಯರಿಗೆ ಸಣ್ಣದಾಗಿ ನೆಗಡಿ ಶುರುವಾಗಿದೆ ಎಂದರೆ ಅದನ್ನು ತಕ್ಷಣವೇ ನಿವಾರಣೆ ಮಾಡಿಕೊಳ್ಳುವ ಪ್ರಯತ್ನ ಮಾಡಿ. ನೀವು ತೆಗೆದುಕೊಳ್ಳುವ ಔಷಧಿಗಳ ಜೊತೆಗೆ ಈ ಆಯುರ್ವೇದ ಚಹಾಗಳನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಇರುವ ತುಳಸಿ ಒಂದು ಔಷಧಿಯ ಸಸ್ಯ. ತುಳಸಿ ಎಲೆಗಳನ್ನು ತಂದು ಚೆನ್ನಾಗಿ ತೊಳೆದು ನೀರಿನಲ್ಲಿ ಹಾಕಿ ಕುದಿಸಿ ಅದಕ್ಕೆ ಶುಂಠಿ, ಚಕ್ಕೆ ಮತ್ತು ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಚಹಾ ತಯಾರಿಸಿ ಕುಡಿಯುತ್ತಿದ್ದರೆ, ನಮ್ಮ ಉಸಿರಾಟಕ್ಕೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳು ಬಗೆಹರಿದು ನೆಗಡಿ, ಕೆಮ್ಮು, ಜ್ವರ ತಕ್ಷಣಕ್ಕೆ ನಿಯಂತ್ರಣಕ್ಕೆ ಬರುತ್ತದೆ.

ಶುಂಠಿ ನಿಮಗೆಲ್ಲ ಗೊತ್ತಿರುವ ಹಾಗೆ ನೈಸರ್ಗಿಕವಾದ ಗಿಡಮೂಲಿಕೆ. ಇದರಲ್ಲಿ ನಮಗೆ ಬೇಕಾದ ಆಂಟಿ ಇನ್ಫ್ಲಮೇಟರಿ ಮತ್ತು ಆಂಟಿ ಮೈಕ್ರೋಬಿಯಲ್ ಗುಣಗಳು ಸಾಕಷ್ಟಿವೆ.
ಹೀಗಾಗಿ ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದಕ್ಕೆ ಶುಂಠಿ ಚೂರುಗಳನ್ನು ಹಾಕಿ ಸ್ವಲ್ಪ ನಿಂಬೆಹಣ್ಣಿನ ರಸ ಮತ್ತು ಲವಂಗವನ್ನು ಸೇರಿಸಿ. ಇದನ್ನು ಸ್ವಲ್ಪ ಹೊತ್ತು ಚೆನ್ನಾಗಿ ಕುದಿಸಿ ಆನಂತರ ಆರಿಸಿ ಸೋಸಿಕೊಳ್ಳಿ. ಈಗ ಇದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ. ಇದು ಸುಲಭವಾಗಿ ನಿಮ್ಮ ಮೂಗು ಕಟ್ಟುವಿಕೆ, ಗಂಟಲು ನೋವು, ಜ್ವರ, ನೆಗಡಿ, ಕೆಮ್ಮು ಇತ್ಯಾದಿಗಳನ್ನು ಹೋಗಲಾಡಿ ಸುತ್ತದೆ.​

ದಾಲ್ಚಿನ್ನಿ ಕೂಡ ತನ್ನಲ್ಲಿ ಆಂಟಿ ಮೈಕ್ರೋಬಿಯಲ್ ಗುಣಗಳನ್ನು ಹೊಂದಿದೆ. ಇದು ನಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತಮ ಪಡಿಸುತ್ತದೆ.
ನೀರಿನಲ್ಲಿ ದಾಲ್ಚಿನ್ನಿ ಚಕ್ಕೆಯನ್ನು ಪುಡಿ ಮಾಡಿ ಹಾಕಿ ಜೊತೆಗೆ ಕಾಳು ಮೆಣಸು ಸೇರಿಸಿ ಚೆನ್ನಾಗಿ ಕುದಿಸಿ. ಆರಿದ ನಂತರ ಇದಕ್ಕೆ ಸ್ವಲ್ಪ ಜೇನುತುಪ್ಪವನ್ನು ಹಾಕಿ. ದಾಲ್ಚಿನ್ನಿ ಚಹಾ ಕುಡಿಯುವುದ ರಿಂದ ನಿಮ್ಮ ಕೆಮ್ಮು, ಕಫ, ಉರಿಯುತ ಸಮಸ್ಯೆಗಳು ನಿವಾರಣೆ ಯಾಗುತ್ತವೆ. ನಿಮ್ಮ ದೇಹಕ್ಕೆ ಚಳಿಗಾಲದ ತಂಪಾದ ವಾತಾವರಣ ದಿಂದ ಮುಕ್ತಿ ಸಿಗುತ್ತದೆ.

ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೇರಳವಾಗಿ ಹೊಂದಿರುವ ಕಾಳುಮೆಣಸು ನಿಮ್ಮ ಉಸಿರಾಟ ವ್ಯವಸ್ಥೆಗೆ ಪೂರಕ ವಾತಾವರಣವನ್ನು ನಿರ್ಮಾಣ ಮಾಡಿಕೊಡುತ್ತದೆ.
ಇದಕ್ಕಾಗಿ ನೀವು ನೀರಿನಲ್ಲಿ ಕಾಳು ಮೆಣಸಿನ ಪುಡಿ ಸೇರಿಸಿ ಜೊತೆಗೆ ಸ್ವಲ್ಪ ಶುಂಠಿ ಮತ್ತು ತುಳಸಿ ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ಇದು ಆರಿದ ನಂತರದಲ್ಲಿ ಸ್ವಲ್ಪ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ ಕುಡಿಯುವುದರಿಂದ ಜ್ವರದ ಲಕ್ಷಣಗಳ ಸಹಿತ ಕೆಮ್ಮು, ಕಫ, ನೆಗಡಿ ಸಮಸ್ಯೆ ದೂರವಾಗುತ್ತದೆ.​

ಅರಿಶಿನ ತನ್ನಲ್ಲಿ ಆಂಟಿ ಇನ್ಫ್ಲಮೇಟರಿ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳನ್ನು ಒಳಗೊಂಡಿದೆ. ಹಾಗಾಗಿ ನಿಮಗೆ ಒಂದು ವೇಳೆ ನೆಗಡಿ, ಕೆಮ್ಮು, ಜ್ವರ ಬಂದಿದ್ದರೆ ನೀವು ಅರಿಶಿನ ಪುಡಿಯನ್ನು ನೀರಿನಲ್ಲಿ ಹಾಕಿ ಮಿಕ್ಸ್ ಮಾಡಿ ಅದಕ್ಕೆ ಸ್ವಲ್ಪ ಕಾಳು ಮೆಣಸು ಮತ್ತು ಶುಂಠಿಯನ್ನು ಸೇರಿಸಿ ಸ್ವಲ್ಪ ಹೊತ್ತು ಕುದಿಸಿ.
ಇದಕ್ಕೂ ಸಹ ಆರಿದ ನಂತರದಲ್ಲಿ ಜೇನುತುಪ್ಪ ಮಿಕ್ಸ್ ಮಾಡಿ ಸೇವನೆ ಮಾಡಿ. ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಚಳಿಗಾಲದ ಆರೋಗ್ಯ ಸಮಸ್ಯೆಗ ಳನ್ನು ನಿವಾರಣೆ ಮಾಡುತ್ತದೆ.

ನಿಮಗೆ ಒಂದು ವೇಳೆ ಈಗಾಗಲೇ ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ಇದ್ದರೆ ಇಂತಹ ಚಹಾಗಳನ್ನು ಪ್ರತಿದಿನ ಕುಡಿಯುವ ಅಭ್ಯಾಸ ಮಾಡಿ ಕೊಳ್ಳುವ ಮೊದಲು ನಿಮ್ಮ ಆರೋಗ್ಯ ತಜ್ಞರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ.

- Advertisement -

Related news

error: Content is protected !!