- Advertisement -
- Advertisement -
ವಿಟ್ಲ: ದೈವದ ಸೇವೆ ಮಾಡುತ್ತಿದ್ದ ಕುಂಡಡ್ಕ ಶೆಡ್ಡು ನಿವಾಸಿ ಬಾಬು ಆಳ್ವ (73) ಅವರು ಇಂದು ಅನಾರೋಗ್ಯದಿಂದ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ. ದೈವದ ಚಾಕರಿ ಮಾಡುತ್ತಿದ್ದ ಬಾಬು ಆಳ್ವ ಅವರು ತೋಡ್ಲ ಕುಟುಂಬದ ಯಜಮಾನರಾಗಿದ್ದು, ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಮೃತರ ಅಂತ್ಯ ಸಂಸ್ಕಾರವು ಕುಂಡಡ್ಕ ಶೆಡ್ಡು ಸ್ವಗೃಹದಲ್ಲಿ ಇಂದು ಮಧ್ಯಾಹ್ನ 12 ಗಂಟೆಯೊಳಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
- Advertisement -








