- Advertisement -
- Advertisement -



ಅನಂತಪುರ: ಅನಂತಪುರ ನಗರದ ಗುಥಿ ಪಟ್ಟಣದ ಬಳಿ ಆಟವಾಡುತ್ತಿದ್ದಾಗ ನೀರಿನ ಬಾಟಲಿ ಮುಚ್ಚಳವನ್ನು ನುಂಗಿ ಒಂದು ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ.ಮೃತಪಟ್ಟ ಮಗು ರಕ್ಷಿತ್ ರಾಮ್(1) ಎಂದು ತಿಳಿದು ಬಂದಿದೆ.
ಮಗುವಿನ ತಾಯಿ ಮೌನಿಕಾ ಕರ್ತವ್ಯದಲ್ಲಿದ್ದಾಗ, ಇವರ ಮಗ ರಕ್ಷಿತ್ ರಾಮ್, ಆಟವಾಡುವಾಗ ಆಕಸ್ಮಿಕವಾಗಿ ನೀರಿನ ಬಾಟಲಿಯ ಮುಚ್ಚಳವನ್ನು ನುಂಗಿದ್ದು, ಅವನ ಗಂಟಲಲ್ಲಿ ಸಿಲುಕಿದೆ. ಇದರಿಂದ ಉಸಿರಾಟ ತೊಂದರೆ ಉಂಟಾಗಿ ಮಗು ಅಲ್ಲೇ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.ತಕ್ಷಣ ಮೌನಿಕಾ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಸಿಪಿಆರ್ ಮಾಡಲಾಯಿತು. ಆದರೆ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
- Advertisement -








