Friday, April 26, 2024
spot_imgspot_img
spot_imgspot_img

ಬಿಜೆಪಿ ಯುವ ಮೋರ್ಚಾದಿಂದ ಪ್ರಪ್ರಥಮ ಬಾರಿಗೆ ಬೆಳ್ತಂಗಡಿಯಲ್ಲಿ ದೀಪಾವಳಿ ದೋಸೆ ಹಬ್ಬ

- Advertisement -G L Acharya panikkar
- Advertisement -

ಬೆಳ್ತಂಗಡಿ(ನ.14): ಶಾಸಕ ಹರೀಶ್ ಪೂಂಜ ಹಾಗೂ ಉದ್ಯಮಿ ಶಶಿಧರ ಶೆಟ್ಟಿ ಯವರು ದೋಸೆ ಹುಯ್ಯುವ ಮೂಲಕ ದೀಪಾವಳಿ ದೋಸೆ ಹಬ್ಬಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಶಾಸಕ ಹರೀಶ್ ಪೂಂಜ ದ.ಕ ಜಿಲ್ಲೆಯಾದ್ಯಂತ 15 ದಿನ ದೀಪಾವಳಿ ಮಾಮೂಲಿಯಾಗಿ ಆಚರಣೆಯಾಗುತ್ತಿತ್ತು. ಹಿಂದೂ ಸಮಾಜದ ದೀಪಾವಳಿ ಸಂಸ್ಕೃತಿಯ ಮೂಲ ಸ್ವರೂಪವನ್ನು ಉಳಿಸಲು ಈ ಕಾರ್ಯಕ್ರಮ 3 ಸಾವಿರ ಕೋಟಿ ದೇವರ ವಾಸಸ್ಥಾನವಿರುವ ಗೋಪೂಜೆಯೊಂದಿಗೆ ಸಮಾಪ್ತಿಗೊಳ್ಳಲಿದೆ. ಒಳ್ಳೆಯ ದೀಪಾಲಂಕಾರದಿಂದ ಬೆಳ್ತಂಗಡಿಗೆ ಬೆಳಕು ಕೊಡುವ ಕಾರ್ಯ ಯುವ ಮೋರ್ಚಾದಿಂದ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಗುರುದತ್ತ ಕಾಮತ್ ಮಾತನಾಡಿ ಇಂದಿನ ವೈಜ್ಞಾನಿಕ ಯುಗದಲ್ಲಿ ಹಿಂದೂ ಸಮಾಜದ ಹಬ್ಬ ಆಚರಣೆಗಳು ನಶಿಸಿ ಹೋಗುತ್ತಿದೆ. ಅಲ್ಲದೆ ಆಚರಣೆ ಮಾಡಲು ಸಮಯವಿಲ್ಲದಿದ್ದಾಗ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಯುವ ಮೋರ್ಚಾದಿಂದ ನಡೆಯುತ್ತಿರುವ ದೋಸೆ ಹಬ್ಬ ಮತ್ತೆ ನಮ್ಮ ಸಂಸ್ಕೃತಿಯನ್ನು ನೆನಪಿಸುವಂತೆ ಮಾಡಿದೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಸುಬ್ರಮಣ್ಯ ಗೌಡ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯುವರಾಜ್ ಜೈನ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ಸುಧಾಕರ್ ಗೌಡ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಯತೀಶ್ ಶೆಟ್ಟಿ, ಮಹಿಳಾ ಬಿಜೆಪಿ ಯುಮೋರ್ಚಾ ಅಧ್ಯಕ್ಷರಾದ ವಿಜಯ ಆರಂಬೋಡಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಅಭಿಲಾಷ್ ಶೆಟ್ಟಿ, ತಾಲೂಕು ಯುವ ಮೋರ್ಚಾ ಅಧ್ಯಕ್ಷರಾದ ಯಶವಂತ ಗೌಡ, ತಾಲೂಕು ಯುವ ಮೋರ್ಚಾ ಕಾರ್ಯದರ್ಶಿ ಉಮೇಶ್ ಕುಲಾಲ್, ತಾಲೂಕು ಯುವ ಮೋರ್ಚಾ ವಿನೀತ್ ಕೋಟ್ಯಾನ್, ಪರಿಶಿಷ್ಟ ಪಂಗಡದ ಯುವ ಮೋರ್ಚಾ ಅಧ್ಯಕ್ಷ ಚೆನ್ನಕೇಶವ ಹಾಗೂ ಪಕ್ಷದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!