- Advertisement -
- Advertisement -
ಕಾಸರಗೋಡು: ಕೋವಿಡ್ ನಿಂದಾಗಿ ವ್ಯಾಪಾರ ಸಂಸ್ಥೆಗಳನ್ನು ತೆರೆಯಲು ನಿರ್ಬಂಧಿಸಿದ ಸರಕಾರದ ವಿರುದ್ಧ ಬದಿಯಡ್ಕ ವ್ಯಾಪಾರಿಗಳು ಇಂದು ಬೆಳಗ್ಗೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸಿದರು.

ಬದಿಯಡ್ಕ ಪೇಟೆಯಲ್ಲಿ ವ್ಯಾಪಾರಿಗಳು ಬಕೆಟ್, ನಾಮಫಲಕಗಳನ್ನು ಹಿಡಿದು ಭಿಕ್ಷಾಟನೆ ನಡೆಸಿ, ಮೆರವಣಿಗೆಯೊಂದಿಗೆ ಮುಂದುವರಿದ ವ್ಯಾಪಾರಿಗಳು ಬದಿಯಡ್ಕ ಪ್ರಧಾನ ಕೂಡುರಸ್ತೆಯ ಪರಿಸರದಲ್ಲಿ ಪ್ರತಿಭಟನೆಯನ್ನು ನಡೆಸಿದರು.

ಈ ಪ್ರತಿಭಟನೆಯಲ್ಲಿ ಕೆ.ವಿ.ವಿ.ಇ.ಎಸ್ ಬದಿಯಡ್ಕ ಯೂನಿಟ್ ಅಧ್ಯಕ್ಷ ಕುಂಜಾರು ಮುಹಮ್ಮದ್ ಹಾಜಿ, ವ್ಯಾಪಾರಿ ಮುಖಂಡರಾದ ನರೇಂದ್ರ ಬದಿಯಡ್ಕ, ಜ್ಞಾನದೇವ ಶೆಣೈ, ರಾಜುಸ್ಟೀಫನ್, ರವಿ , ವಿವಿಧ ವ್ಯಾಪಾರ ಸಂಸ್ಥೆಯ ಮಾಲಕರು, ನೌಕರರು ಪಾಲ್ಗೊಂಡಿದ್ದರು.


- Advertisement -








