Wednesday, April 24, 2024
spot_imgspot_img
spot_imgspot_img

ಲಾರಿಯೊಂದರಲ್ಲಿ ಅಪರಿಚಿತ ವೃದ್ಧೆಯ ರುಂಡ ಪತ್ತೆ!

- Advertisement -G L Acharya panikkar
- Advertisement -

ಬಾಗಲಕೋಟೆ: ಸರಕು ತುಂಬಿದ ಲಾರಿಯೊಂದರಲ್ಲಿ ವೃದ್ಧೆಯ ರುಂಡ ಪತ್ತೆಯಾದ ಘಟನೆ ಇಳಕಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಪರಿಚಿತ ವೃದ್ಧೆಯು ಸುಮಾರು 65 ರಿಂದ 70 ವರ್ಷ ವಯಸ್ಸಿನವರಾಗಿದ್ದರು. ಆಕೆಯ ತಲೆಯನ್ನು ಕತ್ತರಿಸಿ ಚೀಲದಲ್ಲಿ ತುಂಬಿ ಲಾರಿಯಲ್ಲಿ ಎಸೆಯಲಾಗಿದೆ.

ಈ ಲಾರಿಯು ತಮಿಳುನಾಡಿನ ಮಧುರೈನಿಂದ ಇಳಕಲ್ ನಗರಕ್ಕೆ ಬಂದಿದೆ. ಈ ವೇಳೆ ಲಾರಿಯಲ್ಲಿದ್ದ ಗ್ರಾನೈಟ್ ಫಲಕಗಳನ್ನು ಇಳಿಸುವಾಗ ಒಳಗೆ ಬಿದ್ದಿದ್ದ ಚೀಲವನ್ನು ತೆಗೆದು ನೋಡಿದ ಚಾಲಕನಿಗೆ ವೃದ್ಧೆಯ ರುಂಡ ಕಂಡು ಬಂದಿದೆ. ಈ ಬಗ್ಗೆ ಲಾರಿ ಚಾಲಕ ರಾಜಾ ಕಲ್ಯಾಣಸುಂದರ್ ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

Related news

error: Content is protected !!