- Advertisement -
- Advertisement -
ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಕಳೆದ ಭಾನುವಾರ ಶಿವರಾಜ್ ಕುಮಾರ್ ಅವರ 58ನೇ ಹುಟ್ಟುಹಬ್ಬದಂದು ಭಜರಂಗಿ 2 ಚಿತ್ರದ ಟೀಸರ್ ಬಿಡುಗಡೆಯಾಗಿತ್ತು.ಭಜರಂಗಿ ಸಿನೆಮಾ ಹಿಟ್ ಆದಾಗ ನಾವು ಅದರ ಮುಂದುವರಿದ ಭಾಗ ಸಿನೆಮಾ ಮಾಡಲು ನಿರ್ಧರಿಸಿ ತಯಾರಿಸಿದೆವು.2013ರಲ್ಲಿ ಬಿಡುಗಡೆಯಾದ ಭಜರಂಗಿ ಚಿತ್ರದ ಮುಂದುವರಿದ ಭಾಗವೇ ಭಜರಂಗಿ 2. ಇದು ಈ ಮಟ್ಟದಲ್ಲಿ ವೈರಲ್ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನನ್ನ ಹುಟ್ಟುಹಬ್ಬಕ್ಕೆ ಸಿಕ್ಕಿರುವ ಬಹುದೊಡ್ಡ ಕೊಡುಗೆಯಿದು.ಚಿತ್ರಕ್ಕೆ ಸಿಕ್ಕಿದ ಪ್ರೋತ್ಸಾಹಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದರು ಶಿವರಾಜ್ ಕುಮಾರ್.
ಭಜರಂಗಿ 2 ಸಾಕಷ್ಟು ಸಂಖ್ಯೆಯಲ್ಲಿ ಜನರು ಪ್ರಶಂಸೆಯ ಸುರಿಮಳೆ ಹರಿಸಿದ್ದಾರೆ.2 ನಿಮಿಷಕ್ಕಿಂತ ಕಡಿಮೆ ಅವಧಿಯ ಟೀಸರ್ ನಲ್ಲಿ ಡ್ರಾಮಾ, ಆಕ್ಷನ್ ಗಳಿದೆ.ಚಿತ್ರದಲ್ಲಿ ಭಾವನಾ, ಶೃತಿ, ಲೋಕಿ, ಚೆಲುವರಾಜ್ ಮೊದಲಾದವರು ನಟಿಸಿದ್ದಾರೆ.
- Advertisement -