- Advertisement -
- Advertisement -



ವಿಟ್ಲ: ಬೋಳ್ನಾಡು ಭಗವತಿ ಕ್ಷೇತ್ರದಲ್ಲಿ ದಿನಾಂಕ 3 -12 -2023 ರಂದು ಬೋಳ್ನಾಡು ಭಗವತಿ ತೀಯಾ ಸಮಾಜ ಸೇವಾ ಸಮಿತಿಯ ಅಂಗಸಂಸ್ಥೆಯಾದ ತೀಯಾ ಲಿಟ್ಲ್ ಟೈಗರ್ಸ್ ಇದರ ಮಕ್ಕಳಿಗೆ ಸಂಗೀತ ಸ್ಪರ್ಧೆ ಕಾರ್ಯಕ್ರಮ ನಡೆಯಿತು.
ಬೋಳ್ನಾಡು ಕ್ಷೇತ್ರದ ಆಡಳಿತ ಮೋಕ್ತೆಸರರು, ಕೊಡುಗೈ ದಾನಿಗಳು ಆದ ಶ್ರೀ ಕೃಷ್ಣ ಎನ್ ಉಚ್ಚಿಲ್ ಅವರು ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿದರು. ಪ್ರತಿ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಿಗಳಿಗೆ ಒಂದು ಗ್ರಾಂ ಚಿನ್ನದ ನಾಣ್ಯ, ದ್ವಿತೀಯ ಸ್ಥಾನಕ್ಕೆ2000 ರೂ. ನಗದು ,ತೃತೀಯ ಸ್ಥಾನಕ್ಕೆ1000 ರೂ.ನಗದು, ಭಾಗವಹಿಸಿದ ಹಾಗೂ ಸೇರಿದ ಎಲ್ಲಾ ಮಕ್ಕಳಿಗೆ ವಾಟರ್ ಬಾಟಲ್ ಹಾಗೂ ನಗದು ಪುರಸ್ಕಾರ ನೀಡಲಾಯಿತು. ಸಭೆಯಲ್ಲಿದ್ದ ಪೋಷಕರಿಗೆ ವಿವಿಧ ರೀತಿಯ ಪುರಸ್ಕಾರಗಳನ್ನು ನೀಡಲಾಯಿತು.


- Advertisement -