Friday, April 26, 2024
spot_imgspot_img
spot_imgspot_img

ವಿಜ್ಞಾನ ರಸಪ್ರಶ್ನೆ ಸ್ಪರ್ಧೆ : ಸುದೀಪ್ ಕಾಮತ್ ಪ್ರಥಮ

- Advertisement -G L Acharya panikkar
- Advertisement -

ಮಂಗಳೂರು : ಬಜಪೆ ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢಶಾಲೆ ಹಾಗೂ ಅಟಲ್ ಟಿಂಕರಿಂಗ್ ಪ್ರಯೋಗಾಲಯದ ಸಹಯೋಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಹೋಲಿ ಫ್ಯಾಮಿಲಿ ಶಾಲಾ ನಜರತ್ ಸಭಾಂಗಣದಲ್ಲಿ ಮಕ್ಕಳಲ್ಲಿ ವೈಜ್ಞಾನಿಕ ಚಿಂತನ ಕಾರ್ಯಕ್ರಮದ ಅಂಗವಾಗಿ ನಡೆದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಪ್ಯುಲರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಕೆ. ಸುದೀಪ್ ಎಸ್. ಕಾಮತ್ ಪ್ರಥಮ ಸ್ಥಾನ ಪಡೆದಿದ್ದಾರೆ.

ದ್ವಿತೀಯ ಸ್ಥಾನ ಮಾರ್ನಿಂಗ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಗಗನ್ ಹಾಗೂ ತೃತೀಯ ಸ್ಥಾನ ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ದೀಪ್ತಿ ಅವರು ಪಡೆದಿದ್ದಾರೆ.

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಾರ್ನಿಂಗ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಗಗನ್ ಪ್ರಥಮ, ಬಜಪೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಪವಿತ್ರಾ ಎಸ್. ಪೂಜಾರಿ ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.

ಪ್ರಶಸ್ತಿಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಸಂಪರ್ಕಧಿಕಾರಿ ಗೋಪಾಲಕೃಷ್ಣ ಕೆ., ಶಾಲಾ ಮುಖ್ಯೋಪಾಧ್ಯಾಯಿನಿ ಭ| ಸಿಂತಿಯಾ ಡಿ. ಕುನ್ಹ, ಮನೋಜ್,ಪುನೀತ್ ವಿತರಿಸಿದರು.

ವಿಜ್ಞಾನ ಪ್ರಾಧ್ಯಪಿಕೆ ಅರ್ಪಿತಾ ಮೆಂಡೋನ್ಸ್ ಅವರು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಗಣಿತ ಪ್ರಾಧ್ಯಾಪಕ ವಾಸುದೇವ ರಾವ್ ಕುಡುಪು ಕಾರ್ಯಕ್ರಮ ನಿರೂಪಿಸಿದರು. ಹಿಂದಿ ಭಾಷಾ ಪ್ರಾಧ್ಯಪಿಕೆ ಯಶೋಧ ವಂದಿಸಿದರು.

- Advertisement -

Related news

error: Content is protected !!