Friday, April 26, 2024
spot_imgspot_img
spot_imgspot_img

ಸಾವಿನಲ್ಲಿಯೂ ಒಂದಾದ ಸತಿಪತಿಗಳು

- Advertisement -G L Acharya panikkar
- Advertisement -

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಸತಿ ಪತಿಗಳಿಬ್ಬರು ಸಾವಿನಲ್ಲೂ ಒಂದಾಗಿದ್ದಾರೆ. ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹ್ಯಾಳ್ಯಾದ ಓಬಣ್ಣ (58) ಮತ್ತು ಪತ್ನಿ ನಿಂಗಮ್ಮ (47) ಸಾವಿಗೀಡಾದ ದಂಪತಿ.

ಅನಾರೋಗ್ಯದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ 8 ಗಂಟೆಗೆ ಪತ್ನಿ ನಿಂಗಮ್ಮ ಮೃತಪಟ್ಟಿದ್ದು, ರಾತ್ರಿ ಇಡೀ ಭಜನೆ ಮಾಡಲಾಗುತ್ತಿತ್ತು. ಆದರೆ ಓಬಣ್ಣ ಸೋಮವಾರ ಬೆಳಗ್ಗಿನ ಜಾವ 4 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.ಸಾವಿನಲ್ಲಿ ಒಂದಾದ ಸತಿ-ಪತಿಗಳಿಬ್ಬರ ಮೃತದೇಹವನ್ನು ಅಕ್ಕಪಕ್ಕದಲ್ಲಿ ಹೂಳುವ ಮುಖೇನ ಅಂತ್ಯಕ್ರಿಯೆ ನೆರವೇರಿಸಲಾಯಿತು.

- Advertisement -

Related news

error: Content is protected !!