Sunday, June 7, 2026
spot_imgspot_img
spot_imgspot_img

ಬಂಟ್ವಾಳ: ಬಾಳ್ತಿಲ ಗ್ರಾಮ ಪಂಚಾಯತ್‌ನಲ್ಲಿ ಕೇಂದ್ರ ಸರ್ಕಾರದ ಪಿಎಂ ವಿಶ್ವಕಮ೯ ಯೋಜನೆಯ ಮಾಹಿತಿ ಕಾರ್ಯಾಗಾರ

- Advertisement -
- Advertisement -

ಬಂಟ್ವಾಳ: ಕೇಂದ್ರ ಸರ್ಕಾರದ ಪಿಎಂ ವಿಶ್ವಕಮ೯ ಯೋಜನೆಯ ಮಾಹಿತಿಯು ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮ ಪಂಚಾಯತ್‌ನಲ್ಲಿ ನಡೆಯಿತು.

ಪಂಚಾಯತ್ ಅಧ್ಯಕ್ಷ ಬಿ.ಕೆ ಅಣ್ಣುಪೂಜಾರಿಯವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಿ.ಎಸ್.ಸಿ ಪ್ರತಿನಿಧಿ ಪುಷ್ಪ ರಾಜ್ ಕೊಂಗಲಾಯಿರವರು, ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಅಂಗನವಾಡಿಯಲ್ಲಿ ಸ್ರೀಶಕ್ತಿ ಸದಸ್ಯರಿಗೆ ಪಿಎಂ ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳಿಗೆ ದಾಖಲೆಗಳ ಬಗ್ಗೆ ಹಾಗೂ ಈ ಯೋಜನೆಯ ಪ್ರಯೋಜನದ ಬಗ್ಗೆ ಸವಿವರವಾಗಿ ಮಾಹಿತಿಯನ್ನು ನೀಡಿದರು.

ಪಂಚಾಯತ್ ಅಧ್ಯಕ್ಷ ಬಿ.ಕೆ ಅಣ್ಣುಪೂಜಾರಿ ಮಾತನಾಡಿ ಗ್ರಾಮದ ಎಲ್ಲಾ ಜನರಿಗೆ ನಮ್ಮ ಕೇಂದ್ರ ಸರ್ಕಾರದ ಸೌಲಭ್ಯ ಸರಿಯಾದ ರೀತಿಯಲ್ಲಿ ಬಳಕೆ ಮಾಡಲು ನಾವು ನೀವು ಒಟ್ಟಾಗಿ ಸ್ಪಂದಿಸಿದಾಗ ನಮ್ಮ ಕೇಂದ್ರ ಸರ್ಕಾರದ ಅನುದಾನ ಈ ಯೋಜನೆ ಮೂಲಕ ಕಟ್ಟ ಕಡೆಯ ವ್ಯಕ್ತಿಗೆ ಕೂಡ ಮುಟ್ಟುತ್ತದೆ. ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಕಲ್ಪಿಸುವ ರೀತಿಯಲ್ಲಿ ನಮ್ಮ ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರಮೋದಿಯವರ ಕನಸು ನನಸಾಗುವುದರಲ್ಲಿ ಎರಡು ಮಾತಿಲ್ಲ ಎಂದರು.

- Advertisement -

Related news

error: Content is protected !!